ಪ್ರತ್ಯಂಗಿರಾ ವಿಪರೀತ ಮಹಾಭದ್ರಕಾಳ್ಯೈ ಅಮ್ಮನವರ ದೇವಸ್ಥಾನದಲ್ಲಿ ಗುರುಪೂರ್ಣಿಮೆ ಸಂಭ್ರಮ

ಮುಂದೆ ಗುರಿ ಹಿಂದೆ ಗುರು ಇದ್ದಲ್ಲಿ ಜೀವನಯಾತ್ರೆ ಸಲೀಸು ಲೌಕಿಕ, ಅಲೌಕಿಕವರೆಡಕ್ಕೂ ಗುರುವಿನ ಮಾರ್ಗದರ್ಶನ ಬೇಕು. ಗುರುವನ್ನು ದೇವರ ಸ್ಥಾನದಲ್ಲಿ ನೋಡುವ ಪರಂಪರೆ ನಮ್ಮದು.ಗುರುಪೂರ್ಣಿಮೆ ದಿನದಂದು ಗುರುಗಳನ್ನು,ಗುರುಪರಂಪರೆಯನ್ನು ಶ್ರದ್ಧಾ ಭಕ್ತಿಗಳೊಂದಿಗೆ ಆರಾಧಿಸುವ ಸಲುವಾಗಿ ಶ್ರೀ ದೇವಿ ಪ್ರತ್ಯಂಗಿರಾ ವಿಪರೀತ ಮಹಾಭದ್ರಕಾಳ್ಯೈ ಅಮ್ಮನವರ ದೇವಸ್ಥಾನದಲ್ಲಿ ಬಹಳ ವಿಜೃಂಭಣೆಯಿಂದ ಗುರುಪೂರ್ಣಿಮಾ ಕಾರ್ಯಕ್ರಮ ಜರುಗಿತು.ದೀಪ ಬೆಳಗಿಸಿ ಸಮಾರಂಭ ಪ್ರಾರಂಭಿಸಿದ ಶ್ರೀ ದೈವಜ್ಞ ಕರಣ್ ಜ್ಯೋತಿಷಿ ಗುರುಪೂರ್ಣಿಮೆ ಮಹತ್ವ ಸಾರಿದರು.ಇನ್ನು ಈ ಸಂದರ್ಭದಲ್ಲಿ ವಿವಿಧ‌ ಸಮಾಜಿಕ ಕಳಕಳಿ ಹಾಗೂ ಸಮಾಜ ಸೇವೆಯ ಹಿನ್ನಲೆಯಲ್ಲಿ ‌ ಕ್ಷೇತ್ರದ ‌ವತಿಯಿಂದ‌ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.ಅಮ್ಮನವರ ದೇವಸ್ಥಾನದ ಸದ್ಯಸರಿಂದ ದೈವಜಞ ಶ್ರೀ ಕರಣ್ ಜ್ಯೋತಿಷಿಯವರಿಗೆ ಸ್ವರ್ಣ ಹಾರ ಸಮಪರ್ಣೆ ನಡೆಯಿತು. ಸಮಾರಂಭದಲ್ಲಿ ಶ್ರೀಪಾದ ಆರ್.ಕುಲಕರ್ಣಿ,ಪ್ರದೀಪ್ ಎಸ್.ಜೋಶಿ,ಮಂಜುನಾಥ ಭಟ್,ಪದ್ಮನಾಭ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

 

Be the first to comment

Leave a Reply

Your email address will not be published.


*