ಜುಲೈ ೧೫ ಕ್ಕೆ ಬಂಟ್ವಾಳ ಕ್ರೆಡಿಟ್ ಕೋ -ಆಪರೇಟಿವ್ ಸೊಸೈಟಿಯ ಶುಭಾರಂಭ

ಬಂಟ್ವಾಳ ಕ್ರೆಡಿಟ್ ಕೋ -ಆಪರೇಟಿವ್  ಸೊಸೈಟಿಯ ಶುಭಾರಂಭದ ಕುರಿತು ಇಂದು ಪತ್ರಿಕಾಗೋಷ್ಟಿ ಜರುಗಿದೆ. ಬಿ ಸಿ ರೋಡ್‌ನ ರಂಗೋಲಿ ಸಭಾಭವನದಲ್ಲಿ ಸುದ್ದಿಗೋಷ್ಠಿ ಜರುಗಿದ್ದು, ನೂತನ ಪ್ರಧಾನ ಕಛೇರಿಯ ಶಾಖೆಯೊಂದಿಗೆ ಗ್ರಾಹಕರ ಅನುಕೂಲಕ್ಕಾಗಿ ಸಂಪೂರ್ಣ ಗಣಕೀಕೃತ ಗೊಂಡು ಜುಲೈ ೧೫ ರಂದು ಜನರ ಸೇವೆಗೆ ಸಿಗಲಿದೆ. ಇನ್ನು ಇದರಲ್ಲಿ ಆಭರಣ ಸಾಲ , ವಾಹನ ಸಾಲ, ಕೃಷಿಯೇತರ ಸಾಲ ಸೌಲಭ್ಯಗಳೊಂದಿಗೆ ಶುಭಾರಂಭಗೊಳ್ಳಲಿದೆ. ಇನ್ನು ಸೊಸೈಟಿಯನ್ನು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಯ ಅಧ್ಯಕ್ಷರಾದ ಡಾ. ಎಮ್.ಎನ್ . ರಾಜೇಂದ್ರ ಕುಮಾರ್ ಉದ್ಗಾಟಿಸಲಿದ್ದಾರೆ . ಇನ್ನು ಈ ಸಂದರ್ಭದಲ್ಲಿ ಕ್ರೆಡಿಟ್ ಕೋ ಆಪರೇಟ್ ಸೊಸೈಟಿಯ ಅಧ್ಯಕ್ಷರಾದ ಮಾಜಿ ಸಚಿವ ಶ್ರೀ ಬಿ ರಮಾನಾಥ ರೈ , ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಶ್ರೀ ಬೇಬಿ ಕುಂದರ್,ಉಪಾಧ್ಯಕ್ಷರಾದ ಶ್ರೀ ಮಾಯಿಲಪ್ಪ ಸಾಲಿಯಾನ್,ಅಬ್ಬಾಸ್ ಅಲಿ, ಎಮ್ ಎಸ್ ಮೊಹಮದ್.ಪಿಯೂಸ್ ಎಲ್ ರೋಡ್ರಿಗಸ್ ,ಪದ್ಮಶೇಖರ್ ಜೈನ್,ವಾಣಿ ಪ್ರಕಾಶ್ ಕಾರಂತ್,ನಾರಾಯಣ್ ನಾಯ್ಕ್,ಅಲ್ಫಸ್ನ್ಸ್ ಮೆನೇಜೆಸ್, ಸುದರ್ಶನ್ ಜೈನ್, ಅಮ್ಮು ಅರ್ಬಿಗುಡ್ಡೆ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*