ನೀರಿನ ಸಂರಕ್ಷಣೆಯ ಬಗ್ಗೆ ವಿದ್ಯಾರ್ಥಿದೆಸೆಯಲ್ಲಿಯೇ ಆಸಕ್ತಿ ಬೆಳೆಸಿಕೊಳ್ಳಬೇಕು: ವಸಂತ್ ನಾಯಕ್

ಸುಳ್ಯ: ನೀರು ಜಗತ್ತಿನ ಅಮೂಲ್ಯವಾದ ಸಂಪತ್ತು. ನೀರಿಲ್ಲದೆ ಭವಿಷ್ಯದ ದಿನಗಳು ಕರಾಳವಾಗಬಹುದು. ನೀರಿನ ಕೊರತೆಯನ್ನು ನಾವು ಇಂದು ಎದುರಿಸುತ್ತಿದ್ದೇವೆ. ಈ ಬಗ್ಗೆ ನಾವು ಜಾಗೃತರಾಗದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಈ ಬಗ್ಗೆ ವಿದ್ಯಾರ್ಥಿ ದೆಸೆಯಲ್ಲಿಯೇ ವಿದ್ಯಾರ್ಥಿಗಳು ಆಸಕ್ಕಿ ಬೆಳೆಸಿಕೊಳ್ಳಬೇಕು ಎಂದು ಯುವ ಕೃಷಿ ಹಾಗೂ ಜಲತಜ್ಞ ವಸಂತ್ ನಾಯಕ್ ನುಡಿದರು. ಅವರು ದಿನಾಂಕ 8.07.2019 ನೇ ಸೋಮವಾರ ಆರಂತೋಡು ನೆಹರು ಮೆಮೋರಿಯಲ್ ಪಿಯು ಕಾಲೇಜಿನಲ್ಲಿ ಆರ್. ಎನ್. ಫಾರೆಸ್ಟ್ ಸ್ಕೂಲ್ ಕರಿಕೆ ಹಾಗೂ ಕಾಲೇಜಿನ ಪ್ರಕೃತಿ ಇಕೋ ಕ್ಲಬ್ ಆಶ್ರಯ ದಲ್ಲಿ ಜರುಗಿದ ‘ನೀರಿನ ಸಂರಕ್ಷಣೆಯ ಕ್ರಮಗಳು’ ಎಂಬ ವಿಷಯದಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ವಿಶೇಷ ಮಾಹಿತಿ ಉಪನ್ಯಾಸ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಎನ್.ಎಂ.ಸಿ. ಹೈಸ್ಕೂಲಿನ ಮುಖ್ಯ ಶಿಕ್ಷಕರಾದ ಆನಂದ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಆರ್. ಎನ್. ಫಾರೆಸ್ಟ್ ಸ್ಕೂಲಿನ ನಿರ್ದೇಶಕ ರಾದ ರಮಾನಾಥ್ ಬಿ.ಎಸ್ ಹಾಗೂ ನವನೀತ್ ಡಿ. ಹಿಂಗಾಣಿ ಉಪಸ್ಥಿತರಿದ್ದರು. ಸಂಸ್ಥೆಯ ಹಿಂದಿ ಶಿಕ್ಷಕರಾದ ಕಿಶೋರ್ ಕಿರ್ಲಾಯ ಕಾರ್ಯಕ್ರಮ ನಿರ್ವಹಿಸಿದರು.

Be the first to comment

Leave a Reply

Your email address will not be published.


*