ಬಡಗಬೆಳ್ಳೂರು ಗ್ರಾಮ ಪಂಚಾಯತ್ ಮಿಲನ ಕಾರ್ಯಕ್ರಮದಲ್ಲಿ ಭಾಗಿಯಾದ ಮಾಜಿ ಸಚಿವ ರೈ

ಇತ್ತೀಚೆಗೆ ಮಾಜಿ ಸಚಿವ ಬಿ ರಮಾನಾಥ್ ರೈ ಹಲವು ಗ್ರಾಮ ಪಂಚಾಯತ್ ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಲವು ವಿಚಾರಗಳ ಬಗ್ಗೆ ಚರ್ಚೆಯನ್ನು ನಡೆಸಿದ್ದಾರೆ .ಇನ್ನು ಅದೇ ರೀತಿಯಲ್ಲಿ ಇಂದು ಬಡಗಬೆಳ್ಳೂರು ಗ್ರಾಮ ಪಂಚಾಯತ್ ಮಿಲನ ಕಾರ್ಯಕ್ರಮದಲ್ಲಿ ಮಾಜಿ ಸಚಿವ ರೈ ಭಾಗಿಯಾಗಿದ್ದು ,ಈ ಸಂದರ್ಭದಲ್ಲಿ ಹಲವು ವಿಷಯಗಳ ಬಗ್ಗೆ ಗಮನ ಹರಿಸಿದ್ದಾರೆ .ಇನ್ನು ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ರೈ ಪಶ್ಚಿಮ ವಾಹಿನಿ ಯೋಜನೆಯಡಿ ಮೂರು ಡ್ಯಾಂಗಳು ನಿರ್ಮಾಣಗೊಳ್ಳುತ್ತಿದ್ದು ಇದಕ್ಕೆ ಸಾಕಷ್ಟು ಮುತುವರ್ಜಿ ವಹಿಸಿ ಕೆಲಸ ನಡೆಸುತ್ತಿದ್ದೇನೆ ಅಂತ ತಿಳಿಸಿದ್ದಾರೆ .ಜೊತೆಗೆ ಇಲ್ಲಿರುವಂತಹ ರೋಡ್ ನಿರ್ಮಾಣಕ್ಕೂ ಒಂದೂವರೆ ಕೋಟಿಯನ್ನು ಮೀಸಲಿಟ್ಟಿದ್ದೇನೆ ಅನ್ನೋ ಮಾತನ್ನು ತಿಳಿಸಿದ್ದಾರೆ .ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಬಡಗು ಬೆಳ್ಳೂರು ಗ್ರಾಮಕ್ಕೆ ನನ್ನ ಎರಡನೇ ಅವಧಿಯಲ್ಲಿ ನನಗೆ ತೃಪ್ತಿಯಾಗುವ ಮಟ್ಟದಲ್ಲಿ ಕೆಲಸ ನಡೆಸಿದ್ದು ;ಇಲ್ಲಿ ವಾಹನ ಹೋಗುವಂತಹ ಪ್ರತಿಯೊಂದು ರೋಡಿಗೆ ಡಾಂಬರೀಕರಣವನ್ನು ನಡೆಸಿದ್ದೀರಿ ಅನ್ನೋ ಮಾತನ್ನು ಇದೇ ಸಂದರ್ಭದಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ತಾಲೂಕ್ ಪಂಚಾಯತ್ ಉಪಾಧ್ಯಕ್ಷರಾದ ಅಬ್ಬಾಸ್ ಅಲಿ,ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಜಯಂತಿ, ವಲಯ ಅಧ್ಯಕ್ಷರಾದ ವಸಂತ ಪಿ. ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*