ಅಪಾಯಕಾರಿಸ್ಥಿತಿಯಲ್ಲಿರುವ ತಡೆಗೋಡೆ ;ಸೂಕ್ತ ತಡೆಗೋಡೆ ನಿರ್ಮಾಣಕ್ಕೆ ಆಗ್ರಹ

ಮಳೆಗಾಲ ಬಂತೆಂದರೆ ಸಾಕು ಅಲ್ಲಲ್ಲಿ ರೋಡುಕುಸಿತ ಗೊಳ್ಳುವುದು, ಮನೆ ಕುಸಿಯೋದು ಸಾಮಾನ್ಯವಾಗಿಬಿಟ್ಟಿದೆ. ಆದ್ರೆ  ಇಲ್ಲೊಂದು ಆಶ್ರಮದ ಪಕ್ಕದಲ್ಲಿರುವ ತಡೆಗೋಡೆ ಪ್ರತಿ ಮಳೆಗೂ ಬೀಳುತ್ತಲೇ ಇದೆ .ಹೌದು ಜೆಪ್ಪು ಬಳಿಯಿರುವ ಬಪ್ಪಾಲ್ ಫಸ್ಟ್ ಕ್ರಾಸ್ ನಲ್ಲಿ ಸೈಂಟ್ ಆ್ಯಂಟನಿ ಚಾರಿಟೇಬಲ್ ಟ್ರಸ್ಟ್ ಗೆ  ಸಂಬಂಧಪಟ್ಟ ಈ ತಡೆಗೋಡೆ ಪ್ರತಿ ಮಳೆಗೂ ಕುಸಿತಗೊಳ್ಳುತ್ತಿದೆ. ಇನ್ನು ಈ ಬಾರಿಯ ಮಳೆಗೂ ತಡೆಗೋಡೆ ಕುಸಿತಗೊಂಡಿದ್ದು ಅದನ್ನು ಸರಿ ಮಾಡುವ ಕ್ರಮಕ್ಕೂ ಟ್ರಸ್ಟ್ಗೆ ಸಂಬಂಧಪಟ್ಟವರು ಮುಂದಾಗಿದ್ದಾರೆ ಆದರೆ ತಳ ಭಾಗದಿಂದಲೇ ಇದರ ಕೆಲಸ ಆಗಬೇಕಾಗಿದೆ ಯಾಕಂದ್ರೆ ಪ್ಯಾಚ್ ವರ್ಕ್ ಮಾಡೋದರಿಂದ ಈ ತಡೆಗೋಡೆ ಯಾವಾಗ ಬೀಳುತ್ತೆ ಅನ್ನೋದನ್ನು ಕಾಯಬೇಕಾದ ಪರಿಸ್ಥಿತಿ ಕೂಡ ಎದುರಾಗಿದೆ .ಮಾತ್ರವಲ್ಲ ಈ ತಡೆಗೋಡೆಯ ಸುತ್ತಮುತ್ತ ಹಲವು ಮನೆಗಳು ಇದೇ ಜೊತೆಗೆ ಶಾಲಾ ಮಕ್ಕಳು ವಾಹನಗಳು ಸದಾ ಇಲ್ಲಿ ಓಡಾಡುತ್ತಾ ಇರುತ್ತವೆ ಈ ನಿಟ್ಟಿನಲ್ಲಿ ತುಂಬಾ ಆಘಾತಕಾರಿಯಾದ ಘಟನೆ ನಡೆಯುವ ಮುಂಚೆ ಅದನ್ನು ತಪ್ಪಿಸುವ ಪ್ರಯತ್ನವನ್ನು ಟ್ರಸ್ಟಿಗೆ ಸಂಬಂಧಪಟ್ಟವರು ಮಾಡಬೇಕಾಗಿದೆ

Be the first to comment

Leave a Reply

Your email address will not be published.


*