ತುಳು ರಂಗಭೂಮಿಗೆ ಲಹರಿ ತಂಡದ ಕುಸಲ್ದ ಕಲಾವಿದೆರ್ ನಾಟಕ ತಂಡ ಸೇರ್ಪಡೆ

ದ‌.ಕ ಉಡುಪಿ ಜಿಲ್ಲೆಯಲ್ಲಿ ಅದೆಷ್ಟೋ ಕಲಾವಿದರು ಇಂದಿಗೂ ತುಳು ರಂಗಭೂಮಿಯಿಂದಾಗಿ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಇಂತಹ ರಂಗಭೂಮಿಗೆ ರಂಗಸವ್ಯಸಾಚಿ ಲ.ಕಿಶೋರ್ ಡಿ.ಶೆಟ್ಟಿ ಯವರ ಕೊಡುಗೆ ಅಪಾರ.

ಲ. ಗೋಕುಲ್ ಕದ್ರಿಯವರ ಸಹಕಾರದಲ್ಲಿ ಮೋಹನ್ ಕೊಪ್ಪಳ ಕದ್ರಿ ಯವರ ಸಮಗ್ರ ನಿರ್ವಹಣೆ ಯೊಂದಿಗೆ ಮಂಗಳೂರಿನ ಖ್ಯಾತ ಪ್ರಭುದ್ಧ ಕಲಾವಿದರೊಂದಿಗೆ ಉದಯೋನ್ಮುಖ ಕಲಾವಿದರ ಸಮ್ಮಿಲನದ ಲಹರಿ ತಂಡದ ಕುಸಲ್ದ ಕಲಾವಿದೆರ್ ಕುಡ್ಲ ನೂತನ ನಾಟಕ ತಂಡ ಪಾದಾರ್ಪಣೆ ಮಾಡಲಿದೆ.
ತುಳು ರಂಗ ಭೂಮಿ ಕಂಡ ಉದಯೋನ್ಮುಖ ಲೇಖಕ ನಟ ತುಳಸಿದಾಸ್ ಮಂಜೇಶ್ವರ,ರಚಿಸಿದ “ಪುದರ್ ಬೊಡ್ಚಿ ಊರು ಬೊಡ್ಚಿ” ನಾಟಕದ ಮೂಲಕ ಕಲಾ ತಂಡ ತಮ್ಮ ಕಲಾ ಸೇವೆ ಆರಂಭಿಸಲಿದೆ.

Be the first to comment

Leave a Reply

Your email address will not be published.


*