ಕಾಲೇಜು ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರಗೈದ ಆರೋಪಿಗಳಿಗೆ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಧರಣಿ

ಇಲಾಖೆ ಮತ್ತು ಪೋಲೀಸರು  ಯಾವುದೇ ಮುಲಾಜಿಲ್ಲದೇ ಹಾಗೂ ಯವುದೇ ಒತ್ತಡಕ್ಕೆ ಮಣಿಯದೆ ನಿಜವಾದ ಅಪರಾಧಿಗಳಿಗೆ ಸೂಕ್ತ ಕಾನೂನು ಕಠಿಣ ಕ್ರಮ ಕೈಗೊಳ್ಳುವಂತೆ ಮಾಜಿ ಸಚಿವ ರಮಾನಾಥ ರೈ ಒತ್ತಾಯಿಸಿದರು.
ಕಾಲೇಜು ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರಗೈದ ಆರೋಪಿಗಳಿಗೆ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ದ.ಕ. ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಸೋಮವಾರ ನಡೆದ ಧರಣಿಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಮೋದಿ ಅಡಳಿತದ ಎನ್.ಡಿ.ಎ ಸರಕಾರದ ಅವಧಿಯಲ್ಲಿ ದೇಶದ ವಿವಿಧ ಕಡೆ ಸಾಕಷ್ಟು ಹಲ್ಲೆ,ಅತ್ಯಾಚಾರ ಇಂತಹ ಪ್ರಕರಣಗಳು ಸಾಕಷ್ಟು ನಡೆದಿದ್ದು, ಅಪರಾಧಿಗಳು ತಲೆಮರೆಸಿಕೊಂಡಿದ್ದಾರೆ.ಉತ್ತರ ಪ್ರದೇಶದಲ್ಲಿ ಇತ್ತಿಚೆಗೆ ನಡೆದ ಅತ್ಯಾಚಾರ ಪ್ರಕರಣವು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ನಮ್ಮ ಜಿಲ್ಲೆಯ ಏಳು ಶಾಸಕರ ವ್ಯಾಪ್ತಿಯಲ್ಲಿ ಅವರದ್ದೇ ಅದ ಯುವಕರು ಮಾಡಿರುವ ಹಲ್ಲೆ ಮತ್ತು ಹತ್ಯಾಚಾರಿಗಳಿಗೆ ಏನು ಉತ್ತರ ನೀಡುತ್ತೀರಿ ಎಂದು ಪ್ರಶ್ನಿಸಿದರು. ಇತ್ತೀಚೆಗೆ ಸಂಘಪರಿವಾರದವರು ಅಧಿಕಾರಿಗಳಿಗೆ ಹಾಗೂ ಪೋಲೀಸರಿಗೆ ದರ್ಪ ಹಾಗೂ ಮಾರಣಾಂತಿಕ ಹಲ್ಲೆ ನಡೆಸುವುದು ಸರ್ವೇ ಸಾಮಾನ್ಯವಾಗಿದ್ದು,ಬುದ್ದಿವಂತರ ಜಿಲ್ಲೆಯಾದ ನಮ್ಮಲ್ಲಿ ಹಣ್ಣಿನ ವ್ಯಾಪಾರಿಯನ್ನು ತಡೆದು ಗೋಕಳ್ಳನೆಂದು ಹಲ್ಲೆ ನಡೆಸಿ ಬಿಂಬಿಸುತ್ತಾರೆ ಎಂದು ಎನ್.ಡಿ.ಎ ಸರಕಾರದ ವಿರುದ್ಧ ಮಾಜಿ ಸಚಿವ ರಮಾನಾಥ ರೈ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಂತರ ಮಾತನಾಡಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ,20 ವರ್ಷಗಳ ಹಿಂದೆ ಪುತ್ತೂರಿನಲ್ಲಿ ಸೌಮ್ಯಾ ಭಟ್‍ಳನ್ನು ಮುಸ್ಲಿಮ್ ಯುವಕನೊಬ್ಬ ಕೊಂದು ಹಾಕಿದ್ದ. ಅದನ್ನು ಖಂಡಿಸಿ ಇದೇ ಬಿಜೆಪಿಗರು ಪುತ್ತೂರಿನಲ್ಲಿ ಬೆಂಕಿ ಹಚ್ಚಿ ಗಲಭೆ ಎಬ್ಬಿಸಿದರು. ಆ ಬಳಿಕವೂ ಜಿಲ್ಲೆಯ ನಾನಾ ಕಡೆ ಇಂತಹ ಘಟನೆಗಳು ಮರುಕಳಿಸಿತು. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ ಆಡಳಿತ ನಡೆಸುತ್ತಿದೆ. ಅತ್ಯಾಚಾರಿಗಳಿಗೆ ಸಾರ್ವಜನಿಕವಾಗಿ ಗಲ್ಲು ಶಿಕ್ಷೆ ನೀಡುವ ಸೌದಿ ಅರೇಬಿಯಾದ ಕಾನೂನನ್ನು ಇಲ್ಲೂ ಜಾರಿಗೊಳಿಸಲು ಪ್ರಯತ್ನಿಸುವ ಮೂಲಕ ನೊಂದ ಹೆಣ್ಮಕ್ಕಳಿಗೆ ನ್ಯಾಯ ಒದಗಿಸಿ ಎಂದು ಶಕುಂತಳಾ ಶೆಟ್ಟಿ ಆಗ್ರಹಿಸಿದರು.

ಧರಣಿಯಲ್ಲಿ ವಿಧಾನ ಪರಿಷತ್ ಸದಸ್ಯ ಹಾಗೂ ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಶಾಸಕ ಮೊಯ್ದಿನ್ ಬಾವಾ, ಇಬ್ರಾಹೀಂ ಕೋಡಿಜಾಲ್, ಶಾಹುಲ್ ಹಮೀದ್ ಕೆ.ಕೆ., ಮಿಥುನ್ ರೈ, ಶಶಿಧರ ಹೆಗ್ಡೆ, ಮುಹಮ್ಮದ್ ಮೋನು, ಶಾಲೆಟ್ ಪಿಂಟೋ, ಸದಾಶಿವ ಉಳ್ಳಾಲ್, ಸುರೇಶ್ ಬಲ್ಲಾಳ್ ಮತ್ತಿತರರು ಪಾಲ್ಗೊಂಡಿದ್ದರು.

 

Be the first to comment

Leave a Reply

Your email address will not be published.


*