ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಗೆ ಚಾಲನೆ ನೀಡಿದ ಇನ್ಸ್‌ಪೆಕ್ಟರ್ ರಾಮಕೃಷ್ಣ

ಮಂಗಳೂರಿನ ಹಳೆಯಂಗಡಿಯ ಬಳಿಯಿರುವ ಟಾರ್ಪೋಡೋಸ್ ಸ್ಪೋರ್ಟ್ಸ್ ಕ್ಲಬ್ ಕ್ರೀಡಾ ಕ್ಷೇತ್ರದಲ್ಲಿ ಬೆಳೆಯುವ ವಿದ್ಯಾರ್ಥಿ -ವಿದ್ಯಾರ್ಥಿನಿಯರಿಗೆ ಸದಾ ಪ್ರೋತ್ಸಾಹವನ್ನು ನೀಡುತ್ತಲೆ ಬಂದಿದೆ.ಮಾತ್ರವಲ್ಲ ಮಕ್ಕಳಲ್ಲಿನ ಕ್ರೀಡಾ ಸಾಮರ್ಥ್ಯಕ್ಕೆ ತಕ್ಕಂತೆ ಇಲ್ಲಿ ಉತ್ತಮ ತರಬೇತಿ ನೀಡಲಾಗುತ್ತದೆ.ಈ ನಿಟ್ಟಿನಲ್ಲಿ ಜುಲೈ ೬ ರಂದು ಜಿಲ್ಲಾ ಮಟ್ಟದ ಅಂತರ್ ಶಾಲಾ ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ ನಡೆದಿದೆ.ಇನ್ನು ಈ ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧಾಕೂಟಕ್ಕೆ ಸುರತ್ಕಲ್ ಸರ್ಕಲ್ ಇನ್ಸ್‌ಪೆಕ್ಟರ್ ರಾಮಕೃಷ್ಣ ಚಾಲನೆ ನೀಡಿ ಎಲ್ಲಾ ಮಕ್ಕಳಿಗೆ ಶುಭಹಾರೈಸಿದ್ದಾರೆ.ಅಂದಹಾಗೆ ಸ್ಪರ್ಧೆಯಲ್ಲಿ ಬಾಲಕ ಮತ್ತು ಬಾಲಕಿಯರಿಗೆ ವಅವಕಾಶ ನೀಡಿದ್ದು ಬಾಲಕ ಬಾಲಕಿಯರ ಪ್ರತ್ಯೇಕ ಸ್ಪರ್ಧೆಯಲ್ಲಿ ಫಸ್ಟ್ ಸಿಂಗಲ್ಸ್,ಡಬಲ್ಸ್ ಮತ್ತು ಸೆಕೆಂಡ್ ಸಿಂಗಲ್ಸ್ ಮಾದರಿಯಲ್ಲಿ ಹದಿನಾರು ವಿವಿಧ ಶಾಲೆಯ ೨೩೫ ಮಕ್ಕಳು ಭಾಗವಹಿಸಿದ್ದರು. ಇನ್ನು ಕಾರ್ಯಕ್ರಮದಲ್ಲಿ ಮ.ನ.ಪಾ.ದ ಮಾಜಿ ಸದಸ್ಯೆ ಪ್ರತಿಭಾ ಕುಳಾಯಿ, ಟಾರ್ಪೋಡೋಸ್ ಸ್ಪೋರ್ಟ್ಸ್ ಕ್ಲಬ್ ನ ನಿರ್ದೇಶಕ ನಾಗಭೂಷಣ ರೆಡ್ಡಿ,ಸ್ಪರ್ಧಾ ಸಹ ಸಂಯೋಜಕ ಗಣೇಶ್ ಕಾಮತ್, ಬ್ಯಾಡ್ಮಿಂಟನ್ ತರಬೇತುದಾರ ಸಂತೋಷ್ ಖಾರ್ವಿ,ಕೆ.ಪಿ.ಸತೀಶ್,ದೀಪಕ್ ಕೋಟ್ಯಾನ್,ಭಾಗ್ಯರಾಜ್,ನವನೀತ್,ಕಾರ್ತಿಕ್ ಟಾರ್ಫೊಡೋಸ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಗೌತಮ್ ಶೆಟ್ಟಿ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*