ಡಿಸಿಎಂ ಪರಮೇಶ್ವರ್, ಡಿಕೆಶಿ ಸೇರಿ 19 ‘ಕೈ’ ಸಚಿವರ ರಾಜೀನಾಮೆ

ಬೆಂಗಳೂರು: ಆನಂದ್ ಸಿಂಗ್ ರಾಜೀನಾಮೆ ಬೆನ್ನಲ್ಲಿ ಆರಂಭವಾದ ದೋಸ್ತಿ ಸರ್ಕಾರದ ಪತನ ಇಂದು ಸೋಮವಾರ ಅಂತಿಮ ಹಂತ ತಲುಪಿದೆ. ಶನಿವಾರದಂದು 12ಕ್ಕೂ ಹೆಚ್ಚು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ವಿಚಾರ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಇದೀಗ ಅಂತಿಮವಾಗಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಒಟ್ಟು 19 ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಮೂವರು ಕಾಮಗ್ರೆಸ್ ಸಚಿವರು ರಾಜೀನಾಮೆಯಿಂದ ಹಿಂದೆ ಸರಿದಿದ್ದಾರೆ.

ರಾಜೀನಾಮೆ ನೀಡಿದವರು ಯಾರು? ಇಲ್ಲಿದೆ ಪಟ್ಟಿ

ಡಾ.ಜಿ.ಪರಮೇಶ್ವರ್

ಡಿ.ಕೆ.ಶಿವಕುಮಾರ್

ಕೆ.ಜೆ. ಜಾರ್ಜ್

ಕೃಷ್ಣಬೈರೇಗೌಡ

ಶಿವಶಂಕರ ರೆಡ್ಡಿ

ಪ್ರಿಯಾಂಕ್ ಖರ್ಗೆ

ಯು.ಟಿ.ಖಾದರ್

ಜಮೀರ್ ಅಹ್ಮದ್

ವೆಂಕಟರಮಣಪ್ಪ

ರಾಜಶೇಖರ್ ಪಾಟೀಲ್

ಪುಟ್ಟರಂಗಶೆಟ್ಟಿ

ಶಂಕರ್

ಜಯಮಾಲ

ರಹೀಂ ಖಾನ್

ಸತೀಶ್ ಜಾರಕಿಹೊಳಿ

ರಾಜೀನಾಮೆ ನೀಡದವರು ಯಾರು?

ಆರ್.ವಿ.ದೇಶಪಾಂಡೆ

ಶಿವಾನಂದಪಾಟೀಲ್

ಎಂಟಿಬಿ ನಾಗರಾಜ್

ತುಕಾರಾಂ

19 ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ನಾಲ್ವರು ಕಾಂಗ್ರೆಸ್ ಸಚಿವರು ರಾಜೀನಾಮೆ ನೀಡಲು ಹಿಂದೇಟು ಹಾಕಿದ್ದಾರೆ. ಈ ನಾಲ್ವರು ಇಂದು ಬೆಳಗ್ಗೆ ಡಾ. ಜಿ. ಪರಮೇಶ್ವರ್ ನಿವಾಸದಲ್ಲಿ ನಡೆದಿದ್ದ ಸಭೆಗೂ ಗೈರಾಗಿದ್ದರು ಎಂಬುವುದು ಉಲ್ಲೇಖನೀಯ.

Be the first to comment

Leave a Reply

Your email address will not be published.


*