ಸರಣಿ ಅಪಘಾತಕ್ಕೆ ಕಾರಣವಾಗುತ್ತಿರುವ ಕಾರ್ಕಳ -ಚಿಲುಂಬಿ ತಿರುವು

ಕಾರ್ಕಳ ಬಳಿ ಚಿಲುಂಬಿ ತಿರುವಿನಲ್ಲಿ ಸರಣಿ ಅಪಘಾತಗಳು ಸಂಭವಿಸುತ್ತಿದೆ.ಇಲ್ಲಿ ವಾಹನಗಳ ಮುಖಾಮುಖಿ ಅಪಘಾತಗಳು ಸಂಭವಿಸದೆ, ಏಕಮುಖಿ ಅಪಘಾತಗಳು ಸಂಭವಿಸುತ್ತಿದೆ. ವಾಹನಗಳು ಪಲ್ಟಿ ಹೊಡೆದು ತೋಟಕ್ಕೆ ಬೀಳುವುದು, ಮರಕ್ಕೆ ಡಿಕ್ಕಿ ಹೊಡೆಯುವುದು ಅಥವಾ ಬಂಡೆಗೆ ಡಿಕ್ಕಿ ಹೊಡೆಯುವುದು ಈ ತರಹದ ಅಪಘಾತಗಳು ಸಂಭವಿಸುತ್ತಿವೆ.ಇವತ್ತು ತರಕಾರಿ ಸಾಗಿಸುತ್ತಿದ್ದ ಗೂಡ್ಸ್ ಟೆಂಪೋವೊಂದು ಮರಕ್ಕೆ ಗುದ್ದಿ ಜಖಂಗೊಂಡಿದೆ. ರಸ್ತೆ ಅಗಲಗೊಂಡು ದ್ವಿಮುಖವಾಗಿ ಸಂಚರಿಸಲು ರಸ್ತೆಗೆ ಬಣ್ಣಬಳಿಯಲಾಗಿದ್ದರೂ ಅಪಘಾತಗಳು ಸಂಭವಿಸುತ್ತಿರುವುದರ ಹಿಂದೆ ಚಾಲಕರ ಅಜಾಗರೂಕರ ಚಾಲನೆಯೂ ಕಾರಣವಾಗಿರಬಹುದು. ಚಾಲಕರು ಈ ಭಾಗದಲ್ಲಿ ವಾಹನ ಚಲಾಯಿಸುವಾಗ ಜಾಗರೂಕರಾಗಿರುವುದು ಉತ್ತಮ.

Be the first to comment

Leave a Reply

Your email address will not be published.


*