ಜು.೬ರಂದು ಟಾರ್ಪಡೋಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಅಂತರ್ ಶಾಲಾ ವಿಭಾಗದ ಟೇಬಲ್ ಟೆನಿಸ್ ಹಾಗೂ ಬ್ಯಾಡ್ಮಿಂಟನ್ ಟೂರ್ನಮೆಂಟ್ .

ಟಾರ್ಪೊಡೊಸ್ ಸಂಸ್ಥೆ .ಈಗಾಗಲೇ ಸಾಕಷ್ಟು ವಿದ್ಯಾರ್ಥಿ – ವಿದ್ಯಾರ್ಥಿನಿಯರ ಭವಿಷ್ಯ ರೂಪಿಸಿದ ಸ್ಪೋರ್ಟ್ಸ್ ಸಂಸ್ಥೆ ಇದು .ಕ್ರಿಕೆಟ್ ,ಟೇಬಲ್ ಟೆನಿಸ್, ಬ್ಯಾಡ್ಮಿಂಟನ್ ,ಸೇರಿದಂತೆ ಕ್ರೀಡಾಸಕ್ತಿಗಳ ಕ್ರೀಡಾಭಿಮಾನವನ್ನು ಹೆಚ್ಚಿಸಿದ ಸಂಸ್ಥೆಯಿದು .ಕೇವಲ ಮಕ್ಕಳಿಗೆ ಮಾತ್ರವಲ್ಲದೆ ಪೊಲೀಸರು ,ಡಾಕ್ಟರ್ಸ್ ಸೇರಿದಂತೆ ಹಲವು ವಿಭಾಗಗಳಿಗೆ ಇಂತಹ ಟೂರ್ನಮೆಂಟ್  , ಆಯೋಜಿಸುವುದರ ಮೂಲಕ ಕೇವಲ ಕ್ರೀಡಾಭಿಮಾನಿಗಳು ಮಾತ್ರವಲ್ಲದೇ  ಎಲ್ಲರ ಮೆಚ್ಚುಗೆ ಗಳಿಸುವಲ್ಲಿ ಟಾರ್ಪಡೋಸ್ ಸ್ಪೋರ್ಟ್ಸ್ ಕ್ಲಬ್ ಯಶಸ್ವಿಯಾಗಿದೆ. ಇದೀಗ ಮತ್ತೆ ಟಾರ್ಪಡೋಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ  ಅಂತರ್ ಶಾಲಾ ವಿಭಾಗ ಮಟ್ಟದಲ್ಲಿ ಬ್ಯಾಡ್ಮಿಂಟನ್ ಹಾಗೂ ಟೇಬಲ್ ಟೆನಿಸ್ ಟೂರ್ನಮೆಂಟ್ ನಡೆಯಲಿದೆ.   ಜುಲೈ ೬ರ ಶನಿವಾರ ಬೆಳಗ್ಗೆ ೮ ಗಂಟೆಯಿಂದ ಟೂರ್ನಮೆಂಟ್ ಆರಂಭಗೊಳ್ಳಲಿದ್ದು,  ೧೫ವರ್ಷದ ಕೆಳಗಿನ ಬಾಲಕ ಹಾಗೂ ಬಾಲಕಿಯರಿಗೆ ಬ್ಯಾಡ್ಮಿಂಟನ್ ಟೂರ್ನಮೆಂಟ್ ಆಯೋಜಿಸಲಾಗಿದೆ . ಜೊತೆಗೆ ಅದೇ ರೀತಿ ೧೩ ,೧೬ವರ್ಷದ ಬಾಲಕ ಬಾಲಕಿಯರಿಗೆ ಟೇಬಲ್ ಟೆನಿಸ್ ಟೂರ್ನಮೆಂಟ್ ನಡೆಯಲಿದ್ದು ,  ಇನ್ನು ಈ ಟೂರ್ನಮೆಂಟ್ನಲ್ಲಿ ಗೆದ್ದಂತಹ ಬಾಲಕ ಬಾಲಕಿಯರಿಗೆ ಆಕರ್ಷಕ ಟ್ರೋಫಿಯ ಜೊತೆಗೆ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಗುತ್ತದೆ.

Be the first to comment

Leave a Reply

Your email address will not be published.


*