ಅನಿವಾಸಿ ಕನ್ನಡ ವೈದ್ಯರುಗಳಿಂದ ದುಬೈ ನೆಲದಲ್ಲಿ ವೈದ್ಯ ದಿನಾಚರಣೆ

ಜುಲೈ ೧ ವಿಶ್ವ ವೈದ್ಯ ದಿನಾಚರಣೆಯನ್ನು ಎಲ್ಲ ಕಡೆ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಇನ್ನೂ ವೈದ್ಯ ದಿನಾಚರಣೆಯ ಪ್ರಯುಕ್ತ ಅನಿವಾಸಿ ಕನ್ನಡ ವೈದ್ಯರುಗಳು ಸೇರಿ ಬಹಳ ಸಂಭ್ರಮದಿಂದ ದುಬೈನಲ್ಲಿ ಈ ದಿನಾಚರಣೆಯನ್ನು ಆಚರಿಸಿಕೊಂಡಿದ್ದಾರೆ .ದುಬೈನಲ್ಲಿ ನೆಲೆಸಿರುವ ಯುಎಇ ಕನ್ನಡಿಗರ ದುಬೈ ಕುಟುಂಬ ಹಾಗೂ ಹೆಮ್ಮೆಯ ಯುಎಇ ಕನ್ನಡ ಡಾಕ್ಟರ್ ಸಂಘ ಸೋಮವಾರ ಶೇಖ್ ಅಝಿದ್ ರಸ್ತೆಯಲ್ಲಿರುವ ಕೊಂಡ್ರಾ‍‍ಟಸಭಾಂಗಣದಲ್ಲಿ ವೈದ್ಯ ದಿನಾಚರಣೆಯನ್ನು ಬಹಳ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು .ಇನ್ನು ಕಾರ್ಯಕ್ರಮವನ್ನು ಹಿರಿಯ ವೈದ್ಯ ಡಾಕ್ಟರ್ ಗುರು ಮಾಧವ ರಾವ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು .ನಂತರ ಎಲ್ಲ ವೈದ್ಯರುಗಳು ಸೇರಿ ಯುಎಇಯ ರಾಷ್ಟ್ರಗೀತೆ ,ಭಾರತದ ರಾಷ್ಟ್ರಗೀತೆ, ಕರ್ನಾಟಕದ ನಾಡಗೀತೆಯನ್ನು ಹಾಡಿ ಗೌರವ ಸೂಚಿಸಿದರು.ಅಂದಹಾಗೇ ಸರಕಾರಿ ಮತ್ತು ಖಾಸಗಿ ಆರೋಗ್ಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೂರಕ್ಕಿಂತಲೂ ಹೆಚ್ಚು ಕರುನಾಡ ವೈದ್ಯರು ಸೇರಿ ಹಿರಿಯ ವೈದ್ಯರುಗಳಾದ ಡಾಕ್ಟರ್ ಶಾಂತಿ ,ಡಾಕ್ಟರ್ ಮಮತಾ ರಡಾರ್, ಡಾಕ್ಟರ್ ವಸಂತ್, ಡಾಕ್ಟರ್ ಅನಿಲ್ ಕುಮಾರ್, ರಾಘವೇಂದ್ರ ಭಟ್ ,ಡಾಕ್ಟರ್ ಗಾಡ್ರೆಡ ಮುಂತಾದವರು ಒಟ್ಟಿಗೆ ಸೇರಿ ವೈದ್ಯ ದಿನಾಚರಣೆಯನ್ನು ಆಚರಿಸಿದ್ದು ವಿಶೇಷ .ಇನ್ನು ಈ ಸಂದರ್ಭದಲ್ಲಿ ಮಾತನಾಡಿದ ಡಾಕ್ಟರ್ ಗುರು ಮಾಧವರಾವ್ ಕೊಡಗಿಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಅಭಿಯಾನಕ್ಕೆ ರಾಜ್ಯ ಸರಕಾರದ ಗಮನಕ್ಕೆ ಬರುವವರೆಗೆ ಎಲ್ಲರೂ ಒಗ್ಗಟ್ಟಿನಿಂದ ತಿಳಿಸಬೇಕು ಅಂತ ಹೇಳಿದ್ದಾರೆ ಅದೇ ರೀತಿ ಮಾತನಾಡಿದ ಡಾಕ್ಟರ್ ಹರೀಶ್ ದುಬೈ ಕನ್ನಡ ವೈದ್ಯರ ಸಂಘದಿಂದ ಕೊಡಗಿಗೆ ಬೇಕಾದ ಅವಶ್ಯಕತೆಗಳನ್ನು ಪೂರೈಸಲು ಸಲಹೆ ನೀಡಿದ್ರು .ಇನ್ನು ಸಾಕಷ್ಟು ವೈದ್ಯರುಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಕೇಕ್ ಕಟ್ ಮಾಡುವ ಮೂಲಕ ವೈದ್ಯರ ಸಂಭ್ರಮಾಚರಣೆಯನ್ನು ಮಾಡಲಾಯಿತು

Be the first to comment

Leave a Reply

Your email address will not be published.


*