ಬಬ್ಬುಕಟ್ಟೆ ಸರಕಾರಿ ಶಾಲೆಗೆ ಮಾದರಿ ಕಟ್ಟಡಃ ಯು.ಟಿ.ಖಾದರ್

 

ಬಬ್ಬುಕಟ್ಟೆ ಸರಕಾರಿ ಹಿರಿಯ ಪ್ರಾಧಮಿಕ ಹಾಗೂ ಪ್ರೌಢ ಶಾಲೆಗೆ ಮಾದರಿ ಕಟ್ಟಡವನ್ನು ನಿರ್ಮಿಸಿ ಕೊಡುವ ಭರವಸೆಯನ್ನು ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಭಾನುವಾರ ಶಾಲೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಬಬ್ಬುಕಟ್ಟೆ ಸರಕಾರಿ ಹಿ.ಪ್ರಾ ಹಾಗೂ ಪ್ರೌಡ ಶಾಲೆಯ ಕಾಲಕಾಲದ ಎಲ್ಲಾ ಬೇಡಿಕೆಯನ್ನು ಸರಕಾರ ಪೂರೈಸುತ್ತಲೇ ಬಂದಿದೆ. ಇದೀಗ ಹೊಸ ಕಟ್ಟಡಕ್ಕೆ ಬೇಡಿಕೆ ಬಂದಿದ್ದು, ಎಮ್.ಆರ್.ಪಿ.ಎಲ್ ನೊಂದಿಗೆ ಮಾತುಕತೆ ನಡೆಸಿ ಸಿ.ಎಸ್.ಆರ್ ಫಂಡ್ ಮೂಲಕ ಶಾಲೆಗೆ ನೂತನ ಮಾದರಿ ಕಟ್ಟಡ ನಿರ್ಮಿಸಲಾಗುವುದು ಎಂದು ಸಚಿವರು ಹೇಳಿದರು.

ಸಚಿವರು ನೂತನ ಕಟ್ಟಡ ನಿರ್ಮಿಸಲು ಸ್ಥಳ ಪರಿಶೀಲನೆ ಕೂಡ ನಡೆಸಿದರು.

Be the first to comment

Leave a Reply

Your email address will not be published.


*