ಪಾಗಲ್ ಪ್ರೇಮಿ ಪ್ರಕರಣ- ಯುವತಿಯ ಆರೋಗ್ಯ ವಿಚಾರಿಸಿದ ಸಚಿವರು

ಮಂಗಳೂರಿನ ಪಾಗಲ್ ಪ್ರೇಮಿಯಿಂದ ಇರಿತಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಯುವತಿಯ ಆರೋಗ್ಯ ವಿಚಾರಿಸಿದ ಸಚಿವ ಯು.ಟಿ. ಖಾದರ್, ಯುವತಿಯು ಚಿಕಿತ್ಸೆಗೆ ಶೇ.೯೦ರಷ್ಟು ಸ್ಪಂದಿಸುತ್ತಿರುವುದಾಗಿ ಪ್ರಕಟಿಸಿದ್ದಾರೆ.

ಆರೋಪಿ ಪಾಗಲ್ ಪ್ರೇಮಿ ಮಾದಕ ಪದಾರ್ಥ ಸೇವನೆ ಮಾಡಿರುವ ಆರೋಪ ಕೇಳಿಬಂದಿದ್ದು, ಮಾದಕ ದ್ರವ್ಯಗಳ ಮಾರಾಟ ಕುರಿತು ಕಟ್ಟುನಿಟ್ಟಿನ ಕ್ರಮ ಜಾರಿ ಮಾಡುವುದಾಗಿ ಯು.ಟಿ.ಕೆ ಹೇಳಿದ್ದಾರೆ

ಮೊಬೈಲ್ ಚಿತ್ರಿಕರಣ ಮಾಡುವ ಬದಲು ಸಾರ್ವಜನಿಕರು ಯುವತಿಯ ರಕ್ಷಣೆಗೆ ಧಾವಿಸಬೇಕಿತ್ತು-ಖಾದರ್ ಅಭಿಪ್ರಾಯಪಟ್ಟರು.

ತುರ್ತು ಸಂದರ್ಭದಲ್ಲಿ ಸಹಾಯಕ್ಕೆ ಧಾವಿಸಿದವರು ಹಾಗೂ ಪ್ರಾಣ ಉಳಿಸಿದ ವೈದ್ಯರಿಗೆ ಸೂಕ್ತ ರೀತಿಯಲ್ಲಿ ಸರಕಾರದ ವತಿಯಿಂದ ಗೌರವ ನೀಡುವ ಭರವಸೆಯನ್ನು ಸಚಿವರು ನೀಡಿದ್ದಾರೆ.

ಯಾವುದೇ ಸಂದರ್ಭದಲ್ಲೂ ಯುವತಿಯ ಪ್ರಾಣ ಉಳಿಸಲು ಸಹಕಾರ ನೀಡುತ್ತೇವೆ ಎಂದು ಸಚಿವ ಖಾದರ್ ಹೇಳಿದರು.

 

 

Be the first to comment

Leave a Reply

Your email address will not be published.


*