ಹಾಸ್ಟೆಲ್ ಅಭಿವೃದ್ಧಿಯತ್ತ ಸಚಿವ ಯುಟಿ ಖಾದರ್ ಚಿತ್ತ

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಸಮಾಜ ಕಲ್ಯಾಣ ಹಿಂದುಳಿದ ವರ್ಗ ಅಲ್ಪಸಂಖ್ಯಾತ ಮತ್ತು ಐಟಿಡಪಿ ಇಲಾಖೆಯ ಹಾಸ್ಟೆಲ್ ಗಳ ಪ್ರಗತಿ ಪರಿಶೀಲನೆ ಮತ್ತು ಮಳೆ ಹಾನಿ ಕುರಿತ ಸಭೆ ಜರುಗಿದೆ .ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ನೇತೃತ್ವದಲ್ಲಿ ಈ ಸಭೆ ಜರುಗಿದ್ದು ಲಯನ್ಸ್ ರೋಟರಿ ಜೇಸಿಸ್ ಮಹಿಳಾ ಮಂಡಳ ಸೇರಿದಂತೆ ಪ್ರತಿಷ್ಠಿತ ಸಹಕಾರ ಸಂಘಗಳಿಗೆ ಆಯಾ ಊರಿನ ಹಾಸ್ಟೆಲ್ ಗಳ ಮೇಲೆ ನಿಗಾ ವಹಿಸಿ ನಿರ್ವಹಣೆ ಮಾಡಿಸುವ ಬಗ್ಗೆ ಚಿಂತನೆ ನಡೆಸಬೇಕು ಅಂತ ತಿಳಿಸಿದ್ದಾರೆ .ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಖಾದರ್ ಹಾಸ್ಟೆಲ್ಗಳಲ್ಲಿ ತರಕಾರಿ ಅನ್ನ ಆಹಾರದ ಗುಣಮಟ್ಟಕ್ಕೆ ಆದ್ಯತೆ ಕೊಡಬೇಕು ವಿದ್ಯಾರ್ಥಿಗಳ ಸ್ಕಾಲರ್ಶಿಪ್ ಸಕಾಲದಲ್ಲಿ ಸಿಗಬೇಕು ಸಿಬ್ಬಂದಿ ಕೊರತೆ ಇರುವಲ್ಲಿ ಹೊರಗುತ್ತಿಗೆ ಮೂಲಕ ನೇಮಕ ಮಾಡಿಕೊಳ್ನಗರದ ಮಧ್ಯದ ಪಿವಿಎಸ್ ನ ಕುದ್ಮಲ್ ರಂಗರಾವ್ ಹಾಸ್ಟೆಲ್ ಎದುರು ವಾಣಿಜ್ಯ ಸಂಕೀರ್ಣ ನಿರ್ಮಿಸಿದರೆ ಇಲಾಖೆಗೆ ಆದಾಯ ಬರಲಿದೆ ಅಂತ ಅವರು ಸಲಹೆ ನೀಡಿದ್ದರು.ಏನೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೆಚ್ಚುವರಿ ಜಿಲ್ಲಾಧಿಕಾರಿ ಆರ್ ವೆಂಕಟಾಚಲಪತಿ ಸಹಾಯಕ ಕಮಿಷನರ್ ರವಿಚಂದ್ರ ನಾಯಕ್ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಡಾ ಯೋಗೀಶ್ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಸಚಿನ್ ಕುಮಾರ್ ಐಟಿಡಿಪಿ ಅಧಿಕಾರಿ ಹೇಮಲತಾ ಎಸ್ ಅಲ್ಪಸಂಖ್ಯಾತ ಇಲಾಖೆ ಅಧಿಕಾರಿ ಉಸ್ಮಾನ್ ತಹಶೀಲ್ದಾರ್ ಗುರುಪ್ರಸಾದ್ ಪೂರಕ ಮಾಹಿತಿ ನೀಡಿದರು.

Be the first to comment

Leave a Reply

Your email address will not be published.


*