ವಕೀಲ ವೃಂದದವರಿಂದ ಸೀತಾರಾಮ ಶೆಟ್ಟಿ ಯವರಿಗೆ ಶ್ರದ್ಧಾಂಜಲಿ; ಸಂತಾಪ ಸೂಚಿಸಿದ ಸಚಿವ ಖಾದರ್

ಹಿರಿಯ ನ್ಯಾಯವಾದಿ ಸೀತಾರಾಮ ಶೆಟ್ಟಿ ಅವರು ಕಳೆದ ಗುರುವಾರ ಉಸಿರಾಟದ ತೊಂದರೆಯಿಂದ ಬಾರದ ಲೋಕಕ್ಕೆ ತೆರಳಿದ್ದಾರೆ ..ಈ ಹಿನ್ನೆಲೆ ಹಿರಿಯ ನ್ಯಾಯವಾದಿ ಸೀತಾರಾಮ ಶೆಟ್ಟಿ ಅವರ ಶ್ರದ್ಧಾಂಜಲಿ ಕಾರ್ಯವುಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ವತಿಯಿಂದ ಇಂದು ನಡೆಯಿತು .ಇನ್ನು ಈ ಸಂದರ್ಭದಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ಜಿಲ್ಲೆ ಕರಾವಳಿ ಕರ್ನಾಟಕ ಪ್ರದೇಶ ಮಾತ್ರವಲ್ಲದೆ ರಾಷ್ಟ್ರ ಮಟ್ಟದಲ್ಲೂ ಸೀತಾರಾಮ ಅವರು ಹೆಸರು ಮಾಡಿದ್ದಾರೆ ಇನ್ನು ವಕೀಲ ವೃತ್ತಿಯಲ್ಲಿ ಸೀತಾರಾಮರವರುನಿಷ್ಠಾವಂತ ವ್ಯಕ್ತಿ ಇಷ್ಟು ವರ್ಷಗಳ ಕಾಲ ತಾವು ಮಾಡಿದ ವಕೀಲ ವೃತ್ತಿಯಲ್ಲಿ ಯಾವುದೇ ಅಥವಾ ಟೀಕೆಗಳಾಗಳಿ ಬಂದಿಲ್ಲ .ಇಂತಹ ಉತ್ತಮವಾದ ಸೀತಾರಾಮ ಶೆಟ್ಟಿ ಅವರ ಅಗಲುವಿಕೆ ನಾಡಿಗೆ ದೊಡ್ಡ ನಷ್ಟವಾಗಿದೆ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಅಂತ ಸಂತಾಪ ಸೂಚಿಸಿದ್ದಾರೆ …ಇನ್ನು ಇದೇ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ಸೀತಾರಾಮ ಶೆಟ್ಟಿ ಅವರ ಶ್ರದ್ಧಾಂಜಲಿ ಕಾರ್ಯದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸುವುದರ ಮೂಲಕ ಸಂತಾಪವನ್ನು ಸೂಚಿಸಲಾಯಿತು ..ಇನ್ನು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಐವನ್ ಡಿಸೋಜ ಸೇರಿದಂತೆ ಹಲವು ವಕೀಲರು ಭಾಗಿಯಾಗಿದ್ದರು .ಅಂದಹಾಗೆ ಮಂಜಲ್ತೋಡಿ ಸೀತಾರಾಮ ಶೆಟ್ಟಿ ಅವರು ಎಂ ಸೀತಾರಾಮ ಶೆಟ್ಟಿ ಎಂದೇ ಹೆಸರುವಾಸಿ ಮೃತರು ಮೊದಲು ಕಾಸರಗೋಡಿನಲ್ಲಿ ಕಳ್ಳಿಗೆ ಮಹಾಬಲ ಭಂಡಾರಿ ಅವರಲ್ಲಿ ಜೂನಿಯರ್ ಆಗಿ ವಕೀಲಿ ವೃತ್ತಿ ಆರಂಭಿಸಿದ್ದರು ಬಳಿಕ ಮಂಗಳೂರಿಗೆ ಮರಳಿದ ಸೀತಾರಾಮ ಶೆಟ್ಟಿ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡರು .ಏನು ಕರ್ನಾಟಕ ಸರಕಾರದ ಹಲವು ಆಯೋಗಗಳ ವಿಶೇಷ ಪ್ರಾಸಿಕ್ಯೂಟರ್ ಆಗಿ ಸೇವೆ ಸಲ್ಲಿಸಿದ ಇವರು ಮಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ರಾಗಿ ಹಲವು ವರ್ಷಗಳ ಕಾಲ ಕರ್ತವ್ಯ ಸಲ್ಲಿಸಿದ್ದಾರೆ ಜಾಗತಿಕ ಬಂಟರ ಯಾನೆ ನಾಡವರ ಪ್ರತಿಷ್ಠಾನದ ಹಿರಿಯ ಪದಾಧಿಕಾರಿ ಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ …ಅಂದಹಾಗೆ ಸೀತಾರಾಮ ಶೆಟ್ಟಿ ಮಂಗಳೂರಿನ ವಾಸ್ ಲೇನ್ನಲ್ಲಿ ವಾಸವಿದ್ದರೂ ಹಲವು ವರ್ಷಗಳಿಂದ ರಕ್ತದೊತ್ತಡ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದು ಜೂನ್ ೭ರಂದು ಆಸ್ಪತ್ರೆಗೆ ದಾಖಲಾಗಿದ್ದ ಇವರು ಗುರುವಾರ ಮಧ್ಯಾಹ್ನ ನಿಧನರಾಗಿದ್ದಾರೆ ಪತ್ನಿ ಓರ್ವ ಪುತ್ರ ಓರ್ವ ಪುತ್ರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ .ಜೂನ್‌ ೧೪ರಂದು ಮಧ್ಯಾಹ್ನ ೧ರಿಂದ ೩ಗಂಟೆಯವರೆಗೆ ಮೃತರಿಗೆ ಸಂತ ಅಲೋಶಿಯಸ್ ಲಯೋಲಾ ಗ್ರೌಂಡ್ ನಲ್ಲಿ ಅಂತಿಮ ಗೌರವವನ್ನು ಸಲ್ಲಿಸಲಾಯಿತು .ಈ ಸಂದರ್ಭದಲ್ಲಿ ಸಚಿವ ಯುಟಿ ಖಾದರ್ ಸಹಿತ ಗಣ್ಯರು ಸೀತಾರಾಮ ಶೆಟ್ಟಿ ಅವರ ಸ್ವ ನಿವಾಸದಲ್ಲಿ ಅಂತಿಮ ದರ್ಶನವನ್ನು ಪಡೆದಿದ್ದಾರೆ .ಅದೇ ರೀತಿ ಕಾಂಗ್ರೆಸ್ನ ಹಿರಿಯ ಮುಖಂಡ ಜನಾರ್ದನ ಪೂಜಾರಿ ಮಾಜಿ ಸಚಿವ ಅಭಿಮಾನ್ ರೈ ವಿನಯ್ಕುಮಾರ್ ಸೊರಕೆ ಮಾಜಿ ಶಾಸಕರಾದ ಜೆ ಆರ್ ಲೋಬೋ ಹಿರಿಯ ನ್ಯಾಯವಾದಿ ಕಳ್ಳಿಗೆ ತಾರನಾಥ ಶೆಟ್ಟಿ ಮಾಜಿ ರಾಜ್ಯಸಭಾ ಸದಸ್ಯ ಬಿ ಇಬ್ರಾಹಿಂ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ

Be the first to comment

Leave a Reply

Your email address will not be published.


*