ಪಶ್ಚಿಮ ವಾಹಿನಿ ಯೋಜನೆಯ ಕಾಮಗಾರಿಯನ್ನು ವೀಕ್ಷಣೆ ಮಾಡಿದ ಮಾಜಿ ಸಚಿವ ರೈ

ಮಾಜಿ ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈವರು ಇಂದು ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಮಳಲಿಯಲ್ಲಿ ನಿರ್ಮಾಣವಾಗುತ್ತಿರುವ ಪಶ್ಚಿಮ ವಾಹಿನಿ ಯೋಜನೆಯ ಕಾಮಗಾರಿಯನ್ನು ವೀಕ್ಷಣೆ ಮಾಡಿದ್ದಾರೆ.. ಇದು ಮಾಜಿ ಸಚಿವ ದೊಡ್ಡ ಕನಸುಗಳಲ್ಲಿ ಒಂದಾಗಿದ್ದು ಜನರ ಸೇವೆಗೆ ಇದನ್ನು ತರಬೇಕೆಂದು ಸಾಕಷ್ಟು ಶ್ರಮವಹಿಸಿದ್ದಾರೆ. ಇನ್ನು ೩ ಜಿಲ್ಲೆಗೆ ಸೇರಿರುವ ಈ ಪಶ್ಚಿಮ ವಾಹನಿ ಯೋಜನೆ ಸುಮಾರು ೨೬೫ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ. ಅದರಲ್ಲಿ ೮೦ ಕೋಟಿ ಉಡುಪಿ ಜಿಲ್ಲೆಗೆ ಉತ್ತರ ಕನ್ನಡ ಜಿಲ್ಲೆಗೆ ೩೫ ಜೋಟಿ ಅನುದಾನ ಬಿಡುಗಡೆಗೊಂಡಿದ್ದು .ಅಂದಹಾಗೆ ೧೧ ಸೇತುವೆಗಳು ನಿರ್ಮಾಣಗೊಳ್ಳುತ್ತಿದ್ದು .. ೩ ಡ್ಯಾಂಗಳು ಸೇತುವೆಗಳು ಮಾಜಿ ಸಚಿವ ರೈ ವ್ಯಾಪ್ತಿಗೆ ಒಳಪಡುತ್ತಿದ್ದು ಕ್ರಮವಾಗಿ ೧೨ಕೋಟಿ, ೧೫ ಕೋಟಿ ಹಾಗೂ ೧೦ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು ಇದರ ಬಗ್ಗೆ ಸುವಿಸ್ತಾರವಾಗಿ ರೈ ತಿಳಿಸಿದ್ದಾರೆ ..ಇನ್ನು ರೈ ತನ್ನ ಬೆಂಬಲಿಗರು ಹಾಗೂ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Be the first to comment

Leave a Reply

Your email address will not be published.


*