ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿಯಿಂದ ಅವಾಂತರ ಸೃಷ್ಠಿ

ಮಂಗಳೂರಿನ ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ಕಳೆದ ಒಂಬತ್ತು ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದು , ಕಾಮಗಾರಿ ಪರಿಣಾಮ ಮಳೆಗಾಲದಲ್ಲಿ ಸುತ್ತಮುತ್ತಲಿನ ರಸ್ತೆಗಳಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಅಯೋಮಯ ಪರಿಸ್ಥಿತಿ ನಿರ್ಮಾಣವಾಗಿದೆ.ಮಳೆಗಾಲದ ಸಂದರ್ಭ ಇಲ್ಲಿನ ತಗ್ಗು ಪ್ರದೇಶ ಜಲಾವೃತಗೊಳ್ಳುತ್ತವೆ. ಈ ಬಾರಿ ಇದೀಗ ಗೋರಿಗುಡ್ಡ ಬಳಿಯಿಂದ ಪಂಪ್‌ವೆಲ್‌ಗೆ ಹಾಗೂ ಪಂಪ್‌ವೆಲ್‌ನಿಂದ ಗೋರಿಗುಡ್ಡವರೆಗೆ ಇಕ್ಕೆಲಗಳಲ್ಲಿ ಬೈಪಾಸ್ ರಸ್ತೆಗಳನ್ನು ಮಾಡಲಾಗಿದೆ. ಈ ಸರ್ವಿಸ್ ರಸ್ತೆಗಳಲ್ಲಿ ಸದ್ಯ ವಾಹನಗಳ ದಟ್ಟನೆಯಿಂದ ಸದಾ ಟ್ರಾಫಿಕ್ ಜಾಮ್ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಈ ನಡುವೆ ಇದೀಗ ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಮಳೆಗೆ ಬೈಪಾಸ್ ರಸ್ತೆಯ ಮಣ್ಣು ಕುಸಿದು ಸಂಚಾರಕ್ಕೆ ಮತ್ತಷ್ಟು ಅಡ್ಡಿಯಾಗಿದೆ. ಮಾತ್ರವಲ್ಲದೆ ಸಮೀಪದ ಫ್ಲಾಟ್‌ಗಳಲ್ಲಿ ನೀರು ತುಂಬಿ ಸ್ಥಳೀಯರು ಆತಂಕ ಪಡುವಂತಾಗಿದೆ.

 

Be the first to comment

Leave a Reply

Your email address will not be published.


*