ಅಶ್ವತ್ಥ ಮರದ ಕೊಂಬೆ ಬಿದ್ದು ವ್ಯಕ್ತಿಯೊರ್ವನಿಗೆ ಗಂಭೀರ ಗಾಯ

ಅಶ್ವತ್ಥ ಮರದ ಕೊಂಬೆಯೊಂದು ತುಂಡಾಗಿ ಬಿದ್ದ ಪರಿಣಾಮ ಕೆವಸ ಮುಗಿಸಿ ಬಸ್ಸಿಗೆ ಕಾಯುತ್ತಿದ್ದ ವ್ಯಕ್ತಿಯೋರ್ವರು ಗಾಯಗೊಂಡ ಘಟನೆ ಮಂಗಳವಾರ ಸಂಜೆ ಸುಬ್ರಹ್ಮಣ್ಯದಲ್ಲಿ ನಡೆದಿದೆ.ಘಟನೆಯಲ್ಲಿ ಎಂದಿನಂತೆ ಕೆಲಸ ಮುಗಿಸಿಕೊಂಡು ಮನೆಗೆ ತೆರಳಲೆಂದು ಬಸ್ಸಿಗಾಗಿ ಕಾಯುತ್ತಿದ್ದ ಕಡಬ ಸಮೀಪದ ಬಿಳಿನೆಲೆ ನಿವಾಸಿ ಹರೀಶ್ಚಂದ್ರ ಎಂಬವರ ಹಣೆ, ಭುಜಕ್ಕೆ ಗಾಯಗಳಾಗಿದ್ದು, ಸುಬ್ರಹ್ಮಣ್ಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಕರೆದೊಯ್ಯಲಾಗಿದೆ. ಘಟನೆಯ ವೇಳೆ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ಕಡಬ ಸುಬ್ರಹ್ಮಣ್ಯ ಮಧ್ಯೆ ಸರ್ವಿಸ್ ನಡೆಸುವ ಬೊಲೆರೋ ವಾಹನಕ್ಕೂ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಜನಸಂದಣಿ ಕಡಿಮೆ ಇದ್ದ ಕಾರಣ ಹೆಚ್ಚಿನ ಅನಾಹುತ ತಪ್ಪಿದೆ ಎಂಬುದಾಗಿ ಸ್ಥಳೀಯರು ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*