ಸೌಹಾರ್ದ ಸೇತುವೆ ನಿರ್ಮಾಣಕ್ಕೆ ಮುತುವರ್ಜಿವಹಿಸಿದ ಮಾಜಿ ಸಚಿವ ರೈ

ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಸೋಮವಾರ ಕಡೇಶಿವಾಲಯ ದೇವಸ್ಥಾನದ ವಠಾರದಲ್ಲಿ ಪತ್ರಿಕಾಗೋಷ್ಠಿ ಜರುಗಿದೆ.. ಇನ್ನು ಈ ಸಂದರ್ಭದಲ್ಲಿ ಮಾತನಾಡಿದ ರೈ ಕಡೇಶಿವಾಲಯ ಗ್ರಾಮದಿಂದ ಮಣಿನಾಲ್ಕೂರು ಗ್ರಾಮದ ಸಂಪರ್ಕದ ವ್ಯವಸ್ಥೆಗೆ ಸೌಹಾರ್ದ ಸೇತುವೆ ಮಾಡಲಾಗಿದ್ದು .ಇದು ಪವಿತ್ರವಾದ ಎರಡು ಧರ್ಮಗಳ ನಡುವೆ ಇನ್ನಷ್ಟು ಬಾಂಧವ್ಯ ಹೊಂದಲು ಸಹಾಕಾರಿ ಯಾಗಿದೆ ಅಂತ ತಿಳಿಸಿದ್ರು ..ಅಂದಹಾಗೆ ೨೦೧೬ ರಲ್ಲಿ ಮಾಜಿ ಸಚಿವ ರೈ ತಮ್ಮ ಅಧಿಕಾರವಧಿಯಲ್ಲಿ ಎರಡು ಧರ್ಮದ ಆಸ್ತಿಯಾಗಿ ಜಿಲ್ಲೆಯ ಸೌಹಾರ್ದದ ಉದ್ದೇಶದಿಮದ ಈ ಸೇತುವೆಯನ್ನು೭ ನಿರ್ಮಾಣ ಮಾಡಲು ಘೋಷಣೆ ಮಾಡಲಾಯಿತು.. ಅದರಂತೆ ೨೦೧೭ರಲ್ಲಿ ಈ ಸೇತುವೆ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕಿದ್ದು ೨೦೧೮ರಲ್ಲಿ ಟೆಂಡರ್ ಕರೆಯಲಾಯಿತು ಟೆಂಡರ್ ಬಳಿಕ ಕಾಮಾಗಾರಿ ನಡೆಸಲು ಸ್ವಲ್ಪ ಮಟ್ಟಿಗೆ ತಾಂತ್ರಿಕ ತೊಂದರೆಯಾದ್ರೂ ೨೦೧೯ರ ಮೇ ತಿಂಗಳಿನಿಂದ ಕಾಮಾಗಾರಿ ನಡೆಸಲಾಗುತ್ತಿದ್ದು, ಈ ವರ್ಷದೊಳಗೆ ಕಾಮಾಗಾರಿ ಮುಗಿಸಿ ಜನರ ಸೌಲಭ್ಯಕ್ಕೆ ನೀಡಲಾಗುತ್ತದೆ ಅಂತ ಇದೇ ಸಂದರ್ಭದಲ್ಲಿ ತಿಳಿಸಿದ್ರು… ಇನ್ನು ಈ ಸೇತುವೆಗೆ ಸೌಹಾರ್ದ ಸೇತುವೆ ಅಂತ ಹೆಸರಿಟ್ಟಿದ್ದು ೧೯.೮೪ ಕೋಟಿ ರೂ ವೆಚ್ಚದಲ್ಲಿ ಸೇತುವೆ ನಿರ್ಮಾಣಗೊಳ್ಳುತ್ತಿದೆ. ೮.೫೦ ಮೀ ಎತ್ತರದಲ್ಲಿ ೩೧೨ ಮೀ ಉದ್ದದ ಸೇತುವೆಯಲ್ಲಿ ೧೩ ಪಿಲ್ಲರ್ ೧೪ ಫೌಂಡೇಶನ್ ಬರುತ್ತದೆ… ಇನ್ನು ಚೆನ್ನೈ ಮೂಲದ ಕಂಪೆನಿ ಯ ರಾಘವನ್ ಇದರ ಗುತ್ತಿಗೆ ಪಡೆದಿದ್ದು ೩೦ ತಿಂಗಳಲ್ಲಿ ಈ ಕಾಮಾಗಾರಿ ಮುಗಿಸುವ ಭರವಸೆ ನೀಡಿದ್ದಾರೆ. ಇನ್ನು ಈ ಪತ್ರಿಕಾಗೋಷ್ಠಯಲ್ಲಿ ಇಂಜಿನಿಯರ್ ಮಂಜೇಶ್, ಗುತ್ತಿಗೆದಾರ ರಾಘವನ್, ಜಿ.ಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪದ್ಮಶೇಖರ್ ಜೈನ್ , ಮಂಜುಳಾ ಮಾದವ ಮಾವೆ, ಬಂಟ್ವಾಳ ಬ್ಲಾಕ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ತಾ.ಪಂ ಉಪಾಧ್ಯಕ್ಷರಾದ ಅಬ್ಬಾಸ್ ಅಲಿ, ಮಣಿನಾಲ್ಕೂರು ಗ್ರಾಮ.ಪಂ ಅಧ್ಯಕ್ಷೆ ಗೀತಾ ಪೂಜಾರಿ ಮತ್ತಿತ್ತರರು ಉಪಸ್ಥಿತರಿದ್ದರು

Be the first to comment

Leave a Reply

Your email address will not be published.


*