ಏಸ್ ಮೋಟರ್ ಸಂಸ್ಥೆಯಿಂದ ಬೈಕ್ ಪ್ರೀಯರಿಗೆ ವಿಶೇಷ ಕಾರ‍್ಯಕ್ರಮ

ವಿಎಸ್ ದ್ವಿಚಕ್ರ ವಾಹನಗಳ ಅಧಿಕೃತ ವಿತರಕರಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬೊಳುವಾರಿನ ಏಸ್ ಮೋಟರ್ ಸಂಸ್ಥೆಯ ಆಕಾಶ್ ಐತಲ್ ರ ನೇತೃತ್ವದಲ್ಲಿ ಮೋಟಾರ್ ಸ್ಪೋರ್ಟ್ಸ್ ಅಯೋಜನೆಯಲ್ಲಿ ಇಂಡಿಯನ್ ನ್ಯಾಷನಲ್ ಬೈಕ್ ರೆಸ್ ಚಾಂಪಿಯನ್ ಶಿಪ್ ನಡೆಯಿತು. ಪುತ್ತೂರಿನ ಚನ್ನಿಲದಲ್ಲಿ ಸುಮಾರು ೭ ಕಿ.ಮೀ. ದೂರದಲ್ಲಿರೋ ಗುಡ್ಡಗಾಡಿನ ಮಧ್ಯೆಯ ರಸ್ತೆಯಲ್ಲಿ ಈ ಬೈಕ್ ರೆಸ್ ನಡೆದಿದ್ದು ಕರ್ನಾಟಕ ರಾಜ್ಯದ ಸ್ಪರ್ಧಿಗಳ ಜೊತೆಗೆ ಇತರ ರಾಜ್ಯಗಳಿಂದ ಆಗಮಿಸಿದ್ದ ಸುಮಾರು ೮೨ ಬೈಕ್ ರೈಡರ್ ಗಳು ಈ ರ್ಯಲಿಯಲ್ಲಿ ಭಾಗವಹಿಸಿದ್ರು. ಪುತ್ತೂರು ಶಾಸಕ ಸಂಜೀವ ಮಠಂದೂರು ಬೈಕ್ ರೇಸ್ ಗೆ ಅಧಿಕೃತ ಚಾಲನೆ ನೀಡಿದ್ರು. ಮಂಗಳೂರಿನ ಸುದೀಪ್ ಕೊಟ್ಟಾರಿ ಈ ಬೈಕ್ ರ್ಯಲಿಯಲ್ಲಿ ಫಾಸ್ಟ್ ರೈಡರ್ ಆಗಿ ಹೊರಹೊಮ್ಮಿಪ್ರಥಮ ಸ್ಥಾನವನ್ನು ಗಿಟ್ಟಿಸಿದ್ರು. ಅಲ್ದೇ ಮಹಿಳೆಯರು ಕೂಡಾ ಈ ರ್ಯಲಿಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಮಹಿಳೆಯರ ವಿಭಾಗದಲ್ಲಿ ಅಪೂರ್ವ ಮಂಗಳೂರು ಫಾಸ್ಟ್ ಬೈಕ್ ರೈಡರ್ ಆಗಿ ಪ್ರಶಸ್ತಿ ಗಳಿಸಿದ್ರು. ಇನ್ನು ಈ ಬೃಕ್ ರೇಸ್ ಕಾರ‍್ಯಕ್ರಮ ನೋಡಲು ನೂರಾರು ಮಂದಿ ಜಮಾಯಿಸಿದ್ದರು

 

Be the first to comment

Leave a Reply

Your email address will not be published.


*