ಬಜರಂಗದಳ ಮುಖಂಡನ ಇರಿದು ಕೊಲೆಗೆತ್ನ: ಓರ್ವ ಸೆರೆ

ಉಪ್ಪಳ: ಬಜರಂಗದಳ ಬಾಯಾರು ಮಂಡಲ ಸಂಚಾಲಕ ಬಾಯಾರು ಕೊಜಪ್ಪೆ ನಿವಾಸಿ ಪ್ರಸಾದ್ (೨೮)ರನ್ನು ಇರಿದು ಕೊಲೆಗೈಯ್ಯಲೆತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಮಂಜೇಶ್ವರ ಪೊಲೀಸರು ಸೆರೆ ಹಿಡಿದಿದ್ದಾರೆ. ಬಾಯಾರು ದಳಿಕುಕ್ಕು ನಿವಾಸಿ ಅಬೂಬಕ್ಕರ್ ಸಿದ್ದಿಕ್ (೨೭) ಸೆರೆಗೀಡಾದ ವ್ಯಕ್ತಿ. ನಿನ್ನೆ ಬೆಳಿಗ್ಗೆ ಬಾಯಾರು ಪರಿಸರದಿಂದ ಎಸ್.ಐ ಸುಭಾಶ್ಚಂದ್ರನ್ ನೇತೃತ್ವದಲ್ಲಿ ಈತನನ್ನು ಸೆರೆ ಹಿಡಿಯಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ೨ ವಾರಗಳ ರಿಮಾಂಡ್ ವಿಧಿಸಿ ಉಳಿದ ಐದು ಮಂದಿ ಆರೋಪಿಗಳು ಕರ್ನಾಟಕಕ್ಕೆ ಪರಾರಿಯಾಗಿರುವುದಾಗಿ ಸಂಕಿಸಲಾಗಿದ್ದು, ಪೊಲೀಸರ ತಂಡ ಕರ್ನಾಟಕಕ್ಕೆ ಪ್ರಯಾಣ ಬೆಳೆಸಿದೆ. ಆರೋಪಿಗಳನ್ನು ಶೀಘ್ರ ಸೆರೆ ಹಿಡಿಯಲಾಗುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ತಿಂಗಳ ೭ರಂದು ರಾತ್ರಿ ೮.೧೫ರ ವೇಳೆ ಪ್ರಸಾದ್ ಕೊಜಪ್ಪೆ ಅಂಗಡಿಯಲ್ಲಿ ಕುಳಿತಿದ್ದ ವೇಳೆ ಬೈಕ್‌ನಲ್ಲಿ ಬಂದ ೬ ಮಂದಿ ತಂಡ ಹಲ್ಲೆ ನಡೆಸಿ ಇರಿದು ಗಾಯಗೊಳಿಸಿತ್ತು. ಪ್ರಕರಣದಲ್ಲಿ ಒಟ್ಟು ಆರು ಮಂದಿ ವಿರುದ್ಧ ಕೇಸು ದಾಖಲಿಸಿದ್ದಾರೆ.

Be the first to comment

Leave a Reply

Your email address will not be published.


*