ಪ್ರೊ. ಡಾ. ಕಾಪು ಮುಹಮ್ಮದ್‌ರವರಿಗೆ ಇಸಿಬಿಇ ಮಾನ್ಯತಾ ಪ್ರಮಾಣ ಪತ್ರ

ಮಿಗಚಿನ್‌ನಲ್ಲಿ ಜೂನ್ ೭ ರಂದು ಘಟಿಕೋತ್ಸವ ಕಾರ‍್ಯಕ್ರಮ ಜರುಗಿದ್ದು ಈ ಸಂದರ್ಭದಲ್ಲಿ ಲಂಡನ್ ಅಮೇರಿಕನ್ ಸಿಟಿ ಕಾಲೇಜಿನ ಮತ್ತು ಅದರ ಅಂಗಸಂಸ್ಥೆಯ ಡೀನ್ ಮತ್ತು ವ್ಯವಸ್ಥಾಪನಾ ನಿರ್ದೇಶಕರು ಹಾಗೂ ಅಮೇರಿಕದ ಮಿಚಿಗನ್ನಲ್ಲಿರುವ ಅರೆಕಾಲಿಕ ಉಪನ್ಯಾಸಕರಗಾಗಿರೋ ಪ್ರೊ. ಡಾ. ಕಾಪು ಮುಹಮ್ಮದ್ ಅವರು ಬಿಸಿನೆಸ್ ಅಡ್ಮಿನಿಷ್ಟ್ರೇಶನ್‌ನಲ್ಲಿ ಸುಧಾರಿತಾ ಡಿಪ್ಲೋಮಾ ಮತ್ತು ಸ್ನಾತಕೋತರ ಡಿಪ್ಲೋಮಕ್ಕಾಗಿ ಯುರೋಪಿಯನ್ ಕೌನ್ಸಿಲ್ ಪೋರ್ ಬಿಸಿನೆಸ್ ಎಜ್ಯುಕೇಶನಿಂದ ಲಂಡನ್ ಅಮೇರಿಕನ್ ಸಿಟಿ ಕಾಲೇಜಿಗೆ ಮಾನ್ಯತಾ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದಾರೆ..ಇನ್ನು ಈ ಸಂದರ್ಭದಲ್ಲಿ ಮಾತನಾಡಿದ ಪ್ರೊ. ಡಾ. ಕಾಪು ಮುಹಮ್ಮದ್ ಮಾನ್ಯತೆಯನ್ನು ಪಡೆಯಲು ಬಹಳಷ್ಟು ಶ್ರಮ ಹಾಗೂ ಬದ್ದತೆಯ ಅಗತ್ಯವಿದೆ ಅಂತ ತಿಳಿಸೋದರ ಜೊತೆಗೆ ಈ ಮಾನ್ಯತೆಯನ್ನು ಪಡೆಯಲು ಅಧ್ಯಕ್ಷ ಮತ್ತು ಸಿಇಓ ಡಾ. ಪೌಲ್ಸನ್ , ಕಾಲೇಜು ಶಿಕ್ಷಕ ವರ್ಗ ಮತ್ತು ಸಿಬ್ಬಂದಿ, ವಿದ್ಯಾರ್ಥಿಗಳು , ಹಳೆ ವಿದ್ಯಾರ್ಥಿಗಳು ಮತ್ತು ಇತರ ಉದ್ಯೋಗಿಗಳು ಪ್ರಾಮಾಣಿಕ ಕಾಣಿಕೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ .. ಇನ್ನು ಕಾರ‍್ಯಕ್ರಮದಲ್ಲಿ ಬೆಲ್ಜಿಯಂ ನ ಬ್ರೂಸೆಲ್ಸ್‌ನಲ್ಲಿ ಸಿಬಿಇ ಅಧ್ಯಕ್ಷ ಡಾ.ಪೋವೆಲ್ ಝಫನ್ , ಇಸಿಬಿಇ ನಿರ್ದೇಶಕ ಡಾ. ಜಾನ್ ವನ್ಹೆರ್ಕ್, ಕಮೀಷನ್‌ಗಳ ಮಂಡಳಿಯ ಮುಖ್ಯಸ್ಥ ಡಾ.ರಾಬರ್ಟಿಬ್ರೋಕ್ , , ಪರಿಶೀಲನೆ ಮಂಡಳಿ ಮುಖ್ಯಸ್ಥ ಡಾ. ಬಾಬ್ ಜಾನ್ಸನ್ , ಮಾನ್ಯತಾ ನಿರ್ದೇಶಕಿ ಡಾ. ಪೊಲೋನಾ ಟೊಮಿನ್ಕ್ ಇನ್ನು ಹಲವರು ಉಪಸ್ಥಿತಿಯಲ್ಲಿದ್ದರು.

Be the first to comment

Leave a Reply

Your email address will not be published.


*