ಕಾಂಗ್ರೆಸ್ ಮುಖಂಡೆ ರೇಷ್ಮಾ ಪಡೇಕನೂರ್ ಹತ್ಯೆ

ವಿಜಯಪುರ ಕಾಂಗ್ರೆಸ್ ಮುಖಂಡೆ ರೇಷ್ಮಾ ಪಡೇಕನೂರ್ ಹತ್ಯೆಯಾಗಿದ್ದಾರೆ .. ವಿಜಯಪುರ ಜಿಲ್ಲೆಯ ಕೋಲ್ಹಾರ ಬಳಿಯ ಕೃಷ್ಣಾ ನದಿಯ ಸೇತುವೆ ಕೆಳಗಡೆ ಮೃತದೇಹ ಪತ್ತೆಯಾಗಿದೆ. ಇನ್ನು ಗುರುವಾರ ರಾತ್ರಿ ಕೊಲೆಗೈದಿರುವ ಶಂಕೆ ವ್ಯಕ್ತವಾಗುತ್ತಿದೆ. ಸದ್ಯಕ್ಕೆ ಬಂದ ಮಾಹಿತಿ ಪ್ರಕಾರ ಗುರುವಾರ ತಡರಾತ್ರಿ ನೆರೆಯ ಮಹಾರಾಷ್ಟ್ರದ ಎಂಐಎಂ ಮುಖಂಡನೊಬ್ಬನೊಂದಿಗೆ ರೇಷ್ಮಾ ಕಾರಿನಲ್ಲಿ ತೆರಳಿದ್ದು ಇಂದು ಮೃತದೇಹ ಪತ್ತೆಯಾಗಿದೆ .ಇನ್ನು ಯಾವ ಕಾರಣಕ್ಕೆ ಆಕೆಯನ್ನು ಕೊಲೆಮಾಡಲಾಗಿದೆ ಅನ್ನೊದು ತನಿಖೆಯಿಂದ ತಿಳಿದು ಬರಬೇಕಾಗಿದೆ. ಇನ್ನು ಜೆಡಿಎಸ್ ಜಿಲ್ಲಾಧ್ಯಕ್ಷೆಯಾಗಿದ್ದ ರೇಷ್ಮಾ ಪಡೇಕನೂರ ಕಳೆದ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು

Be the first to comment

Leave a Reply

Your email address will not be published.


*