ಗರಡಿ ಉತ್ಸವದಲ್ಲಿ ಭಾಗಿಯಾದ ಮಾಜಿ ಸಚಿವ ರಮಾನಾಥ ರೈ

ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ಮಾಜಿ ಸಚಿವ ಬಿ.ರಮಾನಾಥ ರೈ .ಇಂದು ಕಕ್ಯಪದವಿಗೆ ಎಂಟ್ರಿಕೊಟ್ಟಿದ್ದಾರೆ .. ಬಂಟ್ವಾಳ ತಾಲೂಕಿನ ಕಕ್ಯಪದವಿನ ಶ್ರೀ ಕಡಂಬಿಲ್ತಾಯ ಕೊಡಮಣಿತ್ತಾಯ ಗರಡಿ ಕ್ಷೇತ್ರ ೩ ಕೋಟಿ ವೆಚ್ಚದಲ್ಲಿ ನಿರ್ಮಾನಗೊಂಡಿದ್ದು ಗರಡಿಯಲ್ಲಿ ಇಂದಿನಿಂದ ೨೨ರವರೆಗೆ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯುತ್ತಿದ್ದು ಮೊದಲ ದಿನ ಗರಡಿ ಕ್ಷೇತ್ರದಲ್ಲಿ ಸಭಾ ಕಾರ‍್ಯಕ್ರಮದ ಮೂಲಕ ಕಾರ‍್ಯಕ್ರಮ ಉದ್ಘಟನೆಗೊಂಡಿತ್ತು ಈ ಸಂದರ್ಭದಲ್ಲಿ ಮಾಜಿ ಸಚಿವರು ಹಾಗೂ  ಜೀರ್ಣೋದ್ದಾರ ಸಮಿತಿ  ಗೌರವ ಅಧ್ಯಕ್ಷರು ಆದ  ಶ್ರೀ. ಬಿ. ರಮಾನಾಥ ರೈಯವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿಲಾಯಿತು. ಈ ಸಂದರ್ಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ .ವೀರೇಂದ್ರ ಹೆಗಡೆಯವರು, ಮಾಣಿಲ ಸ್ವಾಮೀಜಿ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೀಗೆ ಹಲವು ಗಣ್ಯರು ಭಾಗಿಯಾಗಿದ್ದರು .. ಇನ್ನು ಈ ಸಂದರ್ಭದಲ್ಲಿ ಮಾತನಾಡಿದ ರೈ ೬೬ ಗರಡಿಗಳಲ್ಲಿ ಇದು ಪ್ರಮುಖವಾದ ಗರಡಿ ಇವತ್ತು ಎಲ್ಲರೂ ಒಂದಾಗಿ ಇದರ ಬ್ರಹ್ಮ ಕಲಶ ನೆರೆವೇರಿಸುತ್ತಿರೋದು ಸಂತೋಷ ಆಗುತ್ತಿದೆ ಅಂತ ತಿಳಿಸಿದ್ರು

Be the first to comment

Leave a Reply

Your email address will not be published.


*