ಸಮಾಜ ಸೇವಕ ಜಯಾ ಶೆಟ್ಟಿ ವಿಧಿವಶ

ಮೂಲ್ಕಿ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷರಾಗಿದ್ದ ಹಿರಿಯ ಉದ್ಯಮಿ ಮೂಲ್ಕಿ ಅತಿಕಾರಿಬೆಟ್ಟು ನಾಲದಡಿ ಮನೆಯ ಎನ್.ಜಯ ಶೆಟ್ಟಿ (೭೫) ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು.
ಮುಂಬೈ ಫಿಲಿಪ್ಸ್ ಕಂಪೆನಿಯ ಹಿರಿಯ ಅಧಿಕಾರಿಯಾಗಿ ನಿವೃತ್ತಿಯ ಬಳಿಕ ಮೂಲ್ಕಿ ಕೈಗಾರಿಕಾ ಪ್ರಾಂಗಣದಲ್ಲಿ ಕಳೆದ ೨೦ ವರ್ಷದ ಹಿಂದೆ ಶುದ್ದ ನೀರಿನ ಉದ್ಯಮ ಪ್ರಾರಂಭಿಸಿ ಕರಾವಳಿ ಭಾಗದಲ್ಲಿ “ಬಿಸ್ಲೆರಿ ಜಯಣ್ಣ” ಎಂದೇ ಹೆಸರು ವಾಸಿಯಾಗಿದ್ದರು. ಮೂಲ್ಕಿ ಪರಿಸರದ ಗ್ರಾಮೀಣ ಶಾಲೆಗಳಿಗೆ ಶೈಕ್ಷಣಿಕ ದಾನಗಳನ್ನು ನೀಡುವುದರೊಂದಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವ ಶಾಲೆಗಳಿಗೆ ಗ್ರಾಮೀಣ ವಲಯದಲ್ಲಿ ಮುಕ್ತವಾಗಿ ಸಹಕಾರ ನೀಡುತ್ತಿದ್ದರು.
ಮೂಲ್ಕಿಯ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷರಾಗಿ ಕೋಲ್ನಾಡು ಕೈಗಾರಿಕಾ ಪ್ರದೇಶಕ್ಕೆ ತನ್ನದೇ ಆದ ಮಾರ್ಗದರ್ಶನ ನೀಡುತ್ತಿದ್ದರು. ನಡಿಬೊಟ್ಟು ಧೂಮಾವತಿ ದೈವಸ್ಥಾನದ ಟ್ರಸ್ಠಿಯಾಗಿ, ಬಪ್ಪನಾಡು ಶ್ರೀ ದುಗರ್?ಪರಮೇಶ್ವರೀ ದೇವಸ್ಥಾನದ ಜೀಣರ್?ದ್ದಾರ ಸಮಿತಿ ಸದಸ್ಯರಾಗಿ, ಮೂಲ್ಕಿ ಕೈಗಾರಿಕಾ ವಲಯದ ಕೊರಗಜ್ಜ ಕ್ಷೇತ್ರಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.
ಪರಿಸರ ಪ್ರೇಮಿಯಾಗಿದ್ದ ಅವರು ತಮ್ಮ ಉದ್ಯಮದಲ್ಲಿ ಸ್ಥಳೀಯರಿಗೆ ಹೆಚ್ಚು ಪ್ರಾಶಸ್ತ್ಯವನ್ನು ನೀಡಿ ಉದ್ಯೋಗದಾತರಾಗಿದ್ದರು, ಇತ್ತೀಚೆಗಷ್ಟೇ ತಮ್ಮ ಬಿಸ್ಲೇರಿ ಉತ್ಪಾದನಾ ಘಟಕದಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಸೋಲಾರ್ ಎನಜರ್?ಗೆ ಬದಲಾಯಿಸುವ ಮೂಲಕ ವಿದ್ಯುತ್ನ ಸ್ವಾವಲಂಭಿಯಾಗಿ ಮಾದರಿಯಾಗಿದ್ದರು. ಅವರು ಪತ್ನಿ, ಎರಡು ಗಂಡು ಮಕ್ಕಳನ್ನು ಅಗಲಿದ್ದಾರೆ.

Be the first to comment

Leave a Reply

Your email address will not be published.


*