ಮತ್ತೆ ಕಡಬದಲ್ಲಿ ಆರಂಭವಾದ ಅಕ್ರಮ ಮರಳು ಸಾಗಾಟ

ಮರಳುಗಾರಿಕೆಗೆ ಯಾವಾಗ ಬ್ರೇಕ್ ಬಿತ್ತೋ ಅಂದಿನಿಂದ ಕಡಬ ಸದಾ ಸುದ್ದಿಯಲ್ಲಿದೆ. ಹೌದು ಅಕ್ರಮ ಮರಳುಗಾರಿಕೆ ಹೆಸರಲ್ಲಿ ಪದೇ ಪದೇ ಕಡಬ ತಾಲೂಕಿನ ಇಚಿಲಂಪಾಡಿ ಸೌಂಡ್ ಮಾಡುತ್ತಿದೆ.ಅಂದಹಾಗೆ ಇಚಿಲಂಪಾಡಿಯಲ್ಲಿ ಇದೀಗ ಮತ್ತೊಮ್ಮೆ ಅಕ್ರಮ ಮರಳುಗಾರಿಕೆ ಆರಂಭವಾಗಿದ್ದು ಕಂದಾಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿ ವರ್ಗ ಮಕಾಡೆ ಮಲಗಿದೆ ಅನ್ನೋದು ಮತ್ತೆ ಪ್ರೂವ್ ಆಗ್ತಿದೆ. ಈ ಹಿಂದೆ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಅನ್ನೋದರ ಬಗ್ಗೆ ಸಾಕ್ಷಿ ಸಮೇತ ಅಧಿಕಾರಿ ವರ್ಗದವರಿಗೆ ಸಾರ್ವಜನಿಕರು ತಿಳಿಸಿದ್ದಾರೆ . ಸಂದರ್ಭದಲ್ಲಿ ಗಣಿ ಇಲಾಖೆಯ ಸೂಚನೆ ಮೇರೆಗೆ ಅಕ್ರಮ ಮರಳು ಸಾಗಾಟವಾಗುತ್ತಿರುವ ಕೆಲ ಕಡೆಗಳಲ್ಲಿ ಪೊಲೀಸ್ ಇಲಾಖೆ ವತಿಯಿಂದ ಕಂದಕ ನಿರ್ಮಿಸಿ ಇಲಾಖೆ ಅಧಿಕಾರಿಗಳು ಬೇಜಾನ್ ನಾಟಕವಾಡಿದ್ರು. ಇದೀಗ ಮತ್ತೆ ಅದೇ ಕಂದಕವನ್ನು ಮುಚ್ಚಿ ಪಿಕಪ್ ಮತ್ತು ಲಾರಿಗಳಲ್ಲಿ ರಾತ್ರಿ ಮರಳು ಸಾಗಾಟ ಮಾಡೋದರ ಮೂಲಕ ಸರ್ಕಾರ ಜನರ ಕಣ್ಣಿಗೆ ಮಣ್ಣೆರುಚುವ ಪ್ರಯತ್ನ ನಡೆಸುತ್ತಿದೆ. ಅಷ್ಟು ಸಾಲದು ಎಂಬಂತೆ ಗಣಿ ಇಲಾಖೆ ಅಧಿಕರಿಗಳು ಈಗಾಗಲೇ ಮರಳು ದಿಬ್ಬಗಳನ್ನು ಗುರುತಿಸಿದ್ದು ಕೆಲವೇ ದಿನದಲ್ಲಿ ಮರಳುಗಾರಿಕೆಗೆ ಅನುಮತಿ ದೊರೆಯಲಿದೆ ಅಂತ ಜನರನ್ನು ನಂಬಿಸಿ ಮೋಸ ಮಾಡುತ್ತಿದ್ದಾರೆ .ಇದಕ್ಕೆ ಸಾಕ್ಷಿ ಎಂಬಂತೆ ಬಡವರ ಪಾಲಿಗೆ ಸಿಗದ ಮರಳು ಹಣವಂತರಿಗೆ ನಿತ್ಯವೂ ಲಭ್ಯವಾಗುತ್ತಿದ್ದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ . ಇನ್ನು ಚಿನ್ನದ ಗಣಿಯಂತಾಗಿರು ಇಚಿಲಂಪಾಡಿಯ ಮರಳು ದಿಬ್ಬದಿಂದ ಹೋಗುವ ಮರಳು ಅಧಿಕ ಬೆಲೆಗೆ ಹೊರಗಡೆ ಮಾರಾಟವಾಗುತ್ತಿದೆ ಎನ್ನುವ ಆರೋಪವು ಕೇಳಿ ಬರುತ್ತಿದೆ ಇಚಿಲಂಪಾಡಿ ಸೇರಿದಂತೆ ನಾನಾ ಕಡೆಗಳಲ್ಲಿ ಅನುಮತಿ ರಹಿತ ಮರಳುಗಾರಿಕೆ ನಡೆಯುತ್ತಿದೆ.ಈ ಬಗ್ಗೆ ಕಂದಾಯ ಇಲಾಖೆ ಅಥವಾ ಪೊಲೀಸ್ ಇಲಾಖೆಯನ್ನು ವಿಚಾರಿಸಿದರೆ ಗೊತ್ತಿಲ್ಲ ಎನ್ನುವ ಸಿದ್ದ ಉತ್ತರ ದೊರೆಯುತ್ತದೆ. ಕಾನೂನು ಪಾಲಿಸುವ ಮೂಲಕ ಕರ್ತವ್ಯ ನಿರ್ವಹಿಸಬೇಕಾದ ಅಧಿಕಾರಿಗಳೇ ಹಣದ ಆಮಿಷಕ್ಕೆ ಬಲಿಯಾಗುತ್ತಿದ್ದಾರೆ ಅನ್ನುವ ಅನುಮಾನ ಜನಸಾಮಾನ್ಯರನ್ನು ಕಾಡುತ್ತಿದೆ. ಮಾತ್ರವಲ್ಲಇಲಾಖೆಯ ಬೇಜವಾಬ್ದಾರಿಯ ಬಗ್ಗೆ ವರದಿ ಮಾಡಿದ ಮಾಧ್ಯಮದವರು ಅಕ್ರಮ ಮರಳು ಕೋರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ವಿಪಾರ್ಯಾಸವೇ ಸರಿ.

Be the first to comment

Leave a Reply

Your email address will not be published.


*