ರಝಾಬಕ್ಷಾರ್ ದರ್ಗಾಕ್ಕೆ ಸಚಿವ ಜಮೀರ್ ಅಹ್ಮದ್‌ಖಾನ್ ಜೊತೆ ಸಚಿವ ಯು.ಟಿ ಖಾದರ್ ಭೇಟಿ

ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಇನ್ನೇನು ಬೆರಳೆಣಿಕೆಯ ದಿನಗಳಷ್ಟೆ ಬಾಕಿ ಇದೆ .ಈ ನಿಟ್ಟಿನಲ್ಲಿ ಚುನಾವಣೆಯ ಪ್ರಚಾರ ಬಿರುಸಿನಿಂದ ಸಾಗಿದೆ. ಎಲ್ಲಾ ಕಾಂಗ್ರೆಸ್ ಕಾರ‍್ಯಕರ್ತರು ಕುಂದುಗೋಳದಲ್ಲಿ ಬೀಡುಬಿಟ್ಟಿದ್ದು ಈ ಬಾರಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಾಯಕನ್ನು ಗೆಲ್ಲಿಸಬೇಕೆಂದು ಪಣತೊಟ್ಟಿದ್ದಾರೆ .ಇನ್ನೊಂದೆಡೆ ರಂಝಾನ್ ಉಪವಾಸ ಕಾಲ ನಡೆಯುತ್ತಿದೆ .ಈ ಹಿನ್ನಲೆ ಕುಂದಗೋಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಂಶಿ ಗ್ರಾಮದ ರಝಾ ಬಕ್ಷಾರ್ ದರ್ಗಾಕ್ಕೆ ಸಚಿವ ಜಮೀರ್ ಅಹಮದ್ ಖಾನ್ ಜೊತೆ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಭೇಟಿ ನೀಡಿ ದರ್ಗಾಕ್ಕೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ.

Be the first to comment

Leave a Reply

Your email address will not be published.


*