ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ ನೇತೃತ್ವದಲ್ಲಿ ನಡೆದ ಬಿರುಸಿನ ಪ್ರಚಾರ

ಕುಂದಗೋಳ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಇರುವ ಹಿನ್ನಲೆ ಪ್ರಚಾರ ಬಿರುಸಿನಿಂದ ನಡೆಯುತ್ತಿದೆ. ಈ ಹಿನ್ನಲೆ ಕಾಂಗ್ರೆಸ್ ಪಕ್ಷದ ಪ್ರಮುಖರು ಈ ಬಾರಿ ತಮ್ಮ ಪಕ್ಷವನ್ನು ಗೆಲ್ಲಿಸಬೇಕೆಂದು ಪಣತೊಟ್ಟಿದ್ದಾರೆ .ಅದರಂತೆ ಇಂದು ಬೆಳಗ್ಗೆ ಕುಂದಗೋಳ ಕ್ಷೇತ್ರದ ಸಂಶೀ ಜಿಲ್ಲಾಪಂಚಾಯತ್ ವ್ಯಾಪ್ತಿಯ ಬೆನಕನಹಳ್ಳಿಯಲ್ಲಿ ಬಿರುಸಿನಿಂದ ಪ್ರಚಾರ ನಡೆದಿದೆ .. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ನೇತೃತ್ವದಲ್ಲಿ ಇಂದು ಪ್ರಚಾರ ಸಭೆ ಹಾಗೂ ಬಹಿರಂಗ ಪ್ರಚಾರ ಜರುಗಿದ್ದು ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಪ್ರಚಾರಕ್ಕೆ ಸಾಥ್ ಕೊಟ್ಟಿದ್ದಾರೆ .ಜೊತೆಯಲ್ಲಿ ಗ್ರಾಮಪಂಚಾಯತ್ ಅಧ್ಯಕ್ಷರಾದ ಸಿದ್ದಪ್ಪ , ಸದಸ್ಯರಾದ ಬಾಬು ಕಾಂಗ್ರೆಸ್ ಮುಖಂಡರಾದ ರಾಜ್‌ದೇಸಾಯಿ ಪ್ರಚಾರದಲ್ಲಿ ಇನ್ನು ಹಲವರು ಪ್ರಚಾರದಲ್ಲಿ ಭಾಗಿಯಾಗಿದ್ದಾರೆ

Be the first to comment

Leave a Reply

Your email address will not be published.


*