ಮಳೆಗಾಗಿ ಅಲ್ಲಾಹುನಲ್ಲಿ ಪ್ರಾರ್ಥಿಸಿದ ಮುಸ್ಲಿಂ ಬಾಂಧವರು

ಮೇ ಮುಗಿಯಿತಾ ಬಂದ್ರೂ ಮಳೆ ಬರುವ ಲಕ್ಷಣಗಳು ಎಲ್ಲೂ ಕಾಣ್ತಾ ಇಲ್ಲ.. ಬಿಸಿಲ ಬೇಗೆಗೆ ಮಂಗಳೂರು ಜನ ಬೇಸತ್ತು ಹೋಗಿದ್ದಾರೆ. ನೀರಿಲ್ಲದೆ ಬರ ಎದುರಿಸುವ ಪ್ರಮೇಯ ಉಂಟಾಲಿದೆ ಅನ್ನೋ ಭಯದಲ್ಲಿ ಜನರಿದ್ದಾರೆ ಇನ್ನೊಂದೆಡೆ ಯಾವಾಗ ಮಳೆ ಬರುತ್ತೆ ಅಂತ ಮಂಗಳುರಿಗರು ಕಾಯುತ್ತಿದ್ದಾರೆ .ಇದೆಲ್ಲರ ಮಧ್ಯೆ ಕುದ್ರೋಳಿಯ ಸಲಾಫಿ ಮಸೀದಿಯ ಖತೀಬ್ ಮೊಹಮ್ಮದ್ ಶೇಖ್ ಸಾಕಿಬ್ ಸಲೀಂ ಉಮ್ರಿ ನೇತೃತ್ವದಲ್ಲಿ ಮುಸ್ಲಿಂ ಬಾಂಧವರು ಮಳೆಗಾಗಿ ವಿಸೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು . ವಿಶೇಷ ನಮಾಝ್ , ಕುತ್ಬಾ ಪಾರಾಯಣ ನಡೆಸೋದರ ಮೂಲಕ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದ್ರು. ಈ ಸಂದರ್ಭದಲ್ಲಿ ಶಾಸಕ ವೇದವ್ಯಾಸ್ ಕಾಮತ್, ಎಸ್ .ಕೆ .ಎಸ್ .ಎಂ ಕಾರ‍್ಯದರ್ಶಿ ಎಂ.ಜಿ ಮುಹಮ್ಮದ್ ಹಾಗೂ ನೂರಾರು ಪುರುಷ ಮಹಿಳೆಯರು ಈ ನಮಾಝ್‌ನಲ್ಲಿ ಭಾಗಿಯಾಗಿದ್ದರು.

Be the first to comment

Leave a Reply

Your email address will not be published.


*