ಮೇ 17 ದುಬೈ ಪರ್ಲ್ ಸಿಟಿ ಸೂಟ್ ಹೋಟೆಲ್ ನಲ್ಲಿ ಡಿ.ಕೆ.ಎಸ್.ಸಿ ಯು.ಎ.ಇ ಬ್ರಹತ್ ಇಫ್ತಾರ್ ಕೂಟ ಅತಿಥಿಗಳಾಗಿ ಡಾ.ಕಾವಲ್ಕಟ್ಟೆ ಹಜ್ರತ್ ಹಾಗೂ ಡಾ.ಅಬ್ದುಲ್ ರಶೀದ್ ಝೈನಿ

ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು ಎ ಇ ರಾಷ್ಟ್ರಿಯ ಸಮಿತಿ ವತಿಯಿಂದ ವರ್ಷಾಂಪ್ರತಿ ನಡೆಸಿಕೊಂಡು ಬರುವ ಬ್ರಹತ್ ಇಫ್ತಾರ್ ಕೂಟ ಶುಕ್ರವಾರ ದಿನಾಂಕ 17 ಮೇ 2019 ರಂದು ದೇರಾ ಸಿಟಿ ಸೆಂಟರ್ ಬಳಿ ಇರುವ ಪರ್ಲ್ ಸಿಟಿ ಸೂಟ್ ಹೋಟೆಲ್ ಸಭಾಂಗಣದಲ್ಲಿ ನಡೆಯಲಿದೆ. ಪ್ರಸ್ತುತ ಕಾರ್ಯಕ್ರಮವು ಅಸರ್ ನಮಾಝಿನ (4.30pm) ನಂತರ ಮರುಹೂಮ್ ಸುಹೈಲ್ ಸಅದಿ ವೇದಿಕೆ ಯಲ್ಲಿ ಸಯ್ಯದ್ ತ್ವಾಹ ಬಾಪಕಿ ತಂಘಳ್, ಡಾ.ಮುಹಮ್ಮದ್ ಫಾಝಿಲ್ ರಝ್ವಿ ಹಜ್ರತ್ ಕಾವಲ್ಕಟ್ಟೆ, ಇಬ್ರಾಹಿಂ ಸಖಾಫಿ ಕೆದಂಬಾಡಿ ಹಾಗೂ ಪ್ರಮಖ ಉಲಮಾಗಳ ನೇತೃತ್ವದಲ್ಲಿ ಜಲಾಲಿಯ ಮಜಲಿಸ್ ನಡೆಯಲಿದ್ದು 6 ಘಂಟೆಗೆ ನಡೆಯುವ ಸಭಾ ಕಾರ್ಯಕ್ರಮವು ಹಾಜಿ.ಮುಹಮ್ಮದ್ ಇಕ್ಬಾಲ್ ಕಣ್ಣಂಗಾರ್ ರವರ ಅದ್ಯಕ್ಷತೆಯಲ್ಲಿ ಮುಖ್ಯ ಪ್ರಭಾಷಣವನ್ನು ದುಬೈ ಅಂತಾರಾಷ್ಟ್ರೀಯ ಹೋಲಿ ಖುರ್ಆನ್ ಅವಾರ್ಡ್ ಪ್ರಭಾಷಣ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿರುವ ಡಾ.ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ, ಕಕ್ಕಿಂಜೆ ಯವರು ಮಾಡಲಿದ್ದಾರೆ. ಅಲ್ಲದೆ ಕಾರ್ಯಕ್ರಮದಲ್ಲಿ ಸಾಧಾತುಗಳು ಉಲಮಾಗಳು ಅಲ್ಲದೆ ಯು.ಎ.ಇ ಯ ವಿವಿಧ ಸಂಘ ಸಂಸ್ಥೆಗಳ ನೇತಾರರು ಉದ್ಯಮಿಗಳುಡಿ.ಕೆ.ಎಸ್.ಸಿ ಹಿತೈಷಿಗಳು ಭಾಗವಹಿಸಲಿದ್ದು ಈ ಮಹತ್ತರವಾದ ಮಜ್ಲಿಸ್ ಹಾಗೂ ಸಭಾ ಕಾರ್ಯಕ್ರಮಕ್ಕೆ ಡಿ.ಕೆ.ಎಸ್.ಸಿ ಹಿತೈಷಿಗಳು ಕುಟುಂಬ ಸಮೇತ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕಾರ್ಯಕ್ರಮದ ಸ್ವಾಗತ ಸಮಿತಿ ಚೆಯರ್ಮೆನ್ ಇಬ್ರಾಹಿಂ ಕಳತ್ತೂರು ವಿನಂತಿಸಿರುತ್ತಾರೆ.

 

Be the first to comment

Leave a Reply

Your email address will not be published.


*