ಅರಬ್ ನೆಲದಲ್ಲಿ ನಡೆದ ಇಫ್ತಾರ್ ಕೂಟ ೨೦೧೯

ಈಗ ಪವಿತ್ರ ರಂಝಾನ್ ಉಪವಾಸ ಕಾಲ.ಈ ಸಂದರ್ಭದಲ್ಲಿ ಮುಸ್ಲಿಂ ಬಾಂಧವರು ಹಲವು ಪುಣ್ಯ ಕಾರ‍್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.ಅದರಂತೆ ಕಳೆದ ೧೮ ವರ್ಷಗಳಿಂದ ಬಿಸಿಎಫ್ ಅಂದ್ರೆ ಬ್ಯಾರೀಸ್ ಕಲ್ಚರಲ್ ಫಾರಂ, ಯುನೈಟೆಡ್ ಅರಬ್ ಎಮಿರೇಟ್ಸ್ ನೆಲದಲ್ಲಿ ಇಫ್ತಾರ್ ಕೂಟವನ್ನು ನಡೆಸುತ್ತಲೇ ಬಂದಿದೆ .ಅದರಂತೆ ಈ ಬಾರಿಯೂ ಮೇ೧೦ ರಂದು ಬ್ಯಾರೀಸ್ ಕಲ್ಚರಲ್ ಫಾರಂವತಿಯಿಂದ ,ದುಬೈನ ಇರಾನಿಯನ್ ಕ್ಲಬ್ ಹಾಲ್‌ನಲ್ಲಿ ಬಹಳ ಅರ್ಥಪೂರ್ಣ ಹಾಗೂ ವಿಜೃಂಭಣೆಯಿಂದ ಇಫ್ತಾರ್ ಕೂಟ ೨೧೦೯ ನಡೆಸಿದ್ರು.ಇನ್ನು ಸಂಜೆ ೪.೩೦ಕ್ಕೆ ಆರಂಭವಾದ ೨೦೧೯ರ ಇಫ್ತಾರ್ ಕೂಟದಲ್ಲಿ ಪುಟ್ಟಮಕ್ಕಳು ಕೀರತ್ ಪಠಣವನ್ನು ಪಠಿಸಿದ್ದಾರೆ ಜೊತೆಗೆ ಇಸ್ಲಾಮಿಕ್ ಕ್ವಿಜ್ ಹಾಗೂ ಸ್ಕಾಲರ್ ಶಿಪ್ ವಿತರಣೆಯನ್ನು ಇದೇ ಸಂದರ್ಭದಲ್ಲಿ ನೀಡಲಾಯಿತು. ಅಂದಹಾಗೆ ೨೦೧೯ರ ಇಫ್ತಾರ್ ಕೂಟದಲ್ಲಿ ಸಭಾ ಕಾರ‍್ಯಕ್ರಮ ಜರುಗಿದ್ದು ಬಿಸಿಎಫ್‌ನಲ್ಲಿ ಸದಾ ಸಕ್ರೀಯರಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಎಲ್ಲದರಲ್ಲೂ ಮುಂದೆ ನಿಂತು ಕಾರ‍್ಯನಿರ್ವಹಿಸುತ್ತಿದ್ದ ಬಿಸಿಎಫ್‌ನ ಉಪಾಧ್ಯಕ್ಷರು ಹಾಗೂ ಇಫ್ತಾರ್ ಕೂಟಕಮಿಟಿಯ ಅಧ್ಯಕ್ಷರು ಅಬ್ದುಲ್ ಲತೀಫ್‌ಮುಲ್ಕಿಯವರು ಬಂದ ಎಲ್ಲರಿಗೂ ಶುಭಾಶಯವನ್ನು ಕೋರಿದ್ದಾರೆ . ಅದೇ ರೀತಿ ಬಿಸಿಎಫ್‌ನ ಅಧ್ಯಕ್ಷರು ಹಾಗೂ ಕರ್ನಾಟಕ ಸಂಘದಲ್ಲಿರೋ ಬಿ.ಕೆ ಯುಸೂಫ್ ಇಪ್ತಾರ್ ಕೂಟದ ಉದ್ದೇಶವನ್ನು ತಿಳಿಸಿದ್ದಾರೆ.. ಬಳಿಕ ಕರ್ನಾಟಕ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರಾಗಿರೋ ಜಫೂಲ ಖಾನ್ ಸಾಬ್ ಮಂಡ್ಯ ಇವರಿಗೆ ಇಫ್ತಾರ್ ಕೂಟದಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.. ಬಳಿಕ ಹಿಂದೂ , ಮುಸ್ಲಿಂ , ಕ್ರೈಸ್ತರನ್ನದೇ ಬಡ ವಿದ್ಯಾರ್ಥಿಗಳ ವಿದ್ಯಾಬ್ಯಾಸಕ್ಕಾಗಿ ಸ್ಕಾಲರ್‌ಶಿಪ್ ದಾನಿಗಳು ಇಂತಿಷ್ಟು ಹಣವನ್ನು ನೀಡುವುದಾಗಿ ಘೋಷಿಸಿದ್ದಾರೆ..ಅಂದಹಾಗೆ ಬ್ಯಾರೀಸ್ ಕಲ್ಚರಲ್ ಫಾರಂ ಕಳೆದ ೧೮ ವರ್ಷಗಳಿಂದ ಉತ್ತಮ ಸಾಮಾಜ ಸೇವೆಯನ್ನು ಈ ಸಮಾಜಕ್ಕೆ ನೀಡುತ್ತಲೇ ಬಂದಿದೆ. ಯಾವುದೇ ಜಾತಿ ಧರ್ಮದ ಹೆಸರು ಹೇಳದೆ ಬಡ ಕುಟುಂಬದವರಿಗೆ ಸಹಾಯ ಹಸ್ತವನ್ನು ನೀಡುತ್ತಲೇ ಬಂದಿದೆ. ಮಾತ್ರವಲ್ಲ ಸಾಕಷ್ಟು ವಿದ್ಯಾರ್ಥಿಗಳು ಬಿಎಸ್‌ಎಫ್ ಅನುದಾನವನ್ನು ಪಡೆದು ಇಂದು ಉನ್ನತ ಹುದ್ದೆಯಲ್ಲಿ ಇದ್ದಾರೆ ಅನ್ನೋದು ಕೂಡ ಸಂತಸದ ವಿಷಯ.. ಇನ್ನು ಈ ಇಫ್ತಾರ್ ಕೂಟಕ್ಕೆ ಕನ್ನಡಿಗರು ಅದೇ ರೀತಿ ಹಿಂದೂ ಕ್ರಿಸ್ತಿಯನ್ನು ಧರ್ಮದವರು ಸೇರಿ ಸುಮಾರು ೮೦೦ ರಿಂದ ೯೦೦ ಜನ ಭಾಗಿಯಾಗಿದ್ದು ವಿಶೇಷ ಸಂಗತಿ.ಜೊತೆಗೆ ಇಫ್ತಾರ್ ಕೂಟಕ್ಕೆ ಮಹಿಳೆರೂ ಭಾಗವಹಿಸಿದ್ದು ಮಹಿಳೆಯರಿಗಾಗಿ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿತ್ತು.. ಇನ್ನು ಸಭಾಕಾರ‍್ಯಕ್ರಮ ಮುಗಿದ ಬಳಿಕ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.

Be the first to comment

Leave a Reply

Your email address will not be published.


*