ಅಲ್ಪಸಂಖ್ಯಾತರಿಗೆ ಸಾಲ ಸೌಲಭ್ಯ – ಆನ್‍ಲೈನ್ ಅರ್ಜಿ ಆಹ್ವಾನ

ಮಂಗಳೂರು : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ನಿ) ಇವರ ವತಿಯಿಂದ ಮುಸ್ಲಿಂ, ಕ್ರಿಶ್ಚಿಯನ್, ಜೈನ್ಸ್, ಸಿಖ್ಖ್, ಹಾಗೂ ಪಾರ್ಸಿ ಜನಾಂಗದ ವಿದ್ಯಾರ್ಥಿಗಳು 2019-20ನೇ ಸಾಲಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ(ಸಿ.ಇ.ಟಿ)ಹಾಜರಾಗಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣ ಕೈಗೊಳ್ಳಲು ನಿಗಮದಿಂದ ಇಂಜಿನಿಯರಿಂಗ್ ಕೋರ್ಸಿಗೆ ವಾರ್ಷಿಕ ಗರಿಷ್ಠ ರೂ 56,000/- ಹಾಗೂ ಬಿ.ಡಿ.ಎಸ್ ಮತ್ತು ಎಂ.ಬಿ.ಬಿ.ಎಸ್ ಕೋಸ್ರ್ಮಗಳಿಗೆ ನೀಟ್ ಮೂಲಕ ವಾರ್ಷಿಕ ಗರಿಷ್ಟ ರೂ. 3,50,000/- ಶೇ 2%ರ ಸೇವಾ ಶುಲ್ಕದ ಆಧಾರದ ಮೇಲೆ ಸಾಲ ಸೌಲಭ್ಯ  ಕಲ್ಪಿಸಲಾಗುತ್ತದೆ. ಆನ್‍ಲೈನ್ ಅರ್ಜಿ ಸಲ್ಲಿಸಲು ಜೂನ್ 5 ಕೊನೆಯ ದಿನಾಂಕವಾಗಿದೆ.
ಈ ಸಂಬಂಧ 2019-20ನೇ ವರ್ಷದ ವೃತ್ತಿಪರ ಶಿಕ್ಷಣ ಸೇರ ಬಯಸುವ ಜಿಲ್ಲೆಯ ಕುಟುಂಬದ ವಾರ್ಷಿಕ ವರಮಾನ ರೂ. 6,00,000/- ಮಿತಿಯಲ್ಲಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಅರ್ಜಿಗಳನ್ನು ಆನ್‍ಲೈನ್ ಮೂಲಕ ಸಲ್ಲಿಸಲು ತಿಳಿಸಲಾಗಿದೆ. ನಿಗಮದ ವೆಬ್‍ಸೈಟ್ www.kmdc.karnataka.gov.in ಲಿಂಕನ್ನು ತೆರೆದು ಆನ್‍ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡಿ ಪ್ರಿಂಟ್‍ಔಟ್‍ನ್ನು ತೆಗೆದುಕೊಂಡು ಕಿಖ ಕೋಡಿನೊಂದಿಗೆ ಇತರೆ ದಾಖಲಾತಿಗಳೊಂದಿಗೆ ನೇರವಾಗಿ ಜಿಲ್ಲಾ ಕಛೇರಿಗೆ ಸಲ್ಲಿಸಬೇಕು. ಅಂತಹ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ/ಸಿ.ಇ.ಟಿಗೆ ಪಾವತಿಸಬೇಕಾದ ಶುಲ್ಕವನ್ನು ಸೀಟು ಪಡೆಯುವ ಹಂತದಲ್ಲಿಯೇ ನಿಗಮದಿಂದ ಸಾಲ ಮಂಜೂರು ಮಾಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಹೊಂದಾಣಿಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲುಬೇಕಾದ ದಾಖಲೆಗಳು:- ಜಾತಿ ಮತ್ತು ಆದಾಯ ಪ್ರಮಾಣ ಪತ್ರ ರೂ. 6,00,000/- ಮಿತಿಯಲ್ಲಿರಬೇಕು. ಆಧಾರ್ ಕಾರ್ಡ್ ಮತ್ತು ರೇಶನ್ ಕಾರ್ಡ್ ಜರಾಕ್ಸ್ ಪ್ರತಿ. ಸಿ.ಇ.ಟಿ ಪರೀಕ್ಷೆ ಪ್ರವೇಶ ಪತ್ರ. ಎಸ್.ಎಸ್.ಎಲ್.ಸಿ ಅಂಕ ಪಟ್ಟಿಯ ದೃಢೀಕೃತ ಪ್ರತಿ. 50 ರೂಪಾಯಿಯ ಇ-ಸ್ಟ್ಯಾಂಪ್‍ನೊಂದಿಗೆ ಇಂಡಿಮ್ನಿಟಿ ಬಾಂಡ್. ವಿದ್ಯಾರ್ಥಿ ಮತ್ತು ಪೋಷಕರ ಭಾವಚಿತ್ರ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ನಿ) ಮೌಲಾನ ಆಝಾದ್ ಅಲ್ಪಸಂಖ್ಯಾತರ ಭವನ, ಓಲ್ಡ್ ಕೆಂಟ್ ರೋಡ್, ಪಾಂಡೇಶ್ವರ, ಮಂಗಳೂರು ದೂರವಾಣಿ ಸಂಖ್ಯೆ-0824-2429044 ಇವರನ್ನು ಸಂಪರ್ಕಿಸಬಹುದು.

Be the first to comment

Leave a Reply

Your email address will not be published.


*