ಶಿಸ್ತುಬದ್ಧವಾಗಿ ಕ್ರೀಡೆಯಲ್ಲಿ ಯುವಕರು ತೊಡಗಿಸಿಕೊಂಡಲ್ಲಿ ರಾಜ್ಯ-ರಾಷ್ಟ್ರಮಟ್ಟವನ್ನು ಪ್ರತಿನಿಧಿಸಬಹುದು- ಗೌತಮ್ ಶೆಟ್ಟಿ

ದಿ. ಸುಭಾಸ್ ಸಾಲ್ಯಾನ್ ಸವಿನೆನಪಿಗಾಗಿ, ಮಾರುತಿ ಸ್ಪೋರ್ಟ್ಸ್ ಕ್ಲಬ್ ಮಿತ್ರಪಟ್ಣ ಮುಕ್ಕ ಇದರ ಆಶ್ರಯದಲ್ಲಿ ಪಡುಪಣಂಬೂರು ಬಾಕಿಮಾರ್ ಗದ್ದೆಯಲ್ಲಿ ನಿಗದಿತ ಓವರ್‌ಗಳ ಓವರ್ ಆರ್ಮ್ ಕ್ರಿಕೇಟ್ ಪಂದ್ಯಾವಳಿ ಜರುಗಿದ್ದು ಮುಕ್ಕ ಮಾರುತಿ ಸ್ಪೋರ್ಟ್ಸ್ ಕ್ಲಬ್ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ದ್ವಿತೀಯ ಸ್ಥಾನಕ್ಕೆ ಕೋಸ್ಟಲ್ ಮುಕ್ಕ ತೃಪ್ತಿಪಟ್ಟುಕೊಂಡಿದೆ.. ಇನ್ನು ಪಂದ್ಯಾವಳಿಯ ಸಮಾರೋಪಕ್ಕೆ ಟಾರ್ಪಡೋಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಗೌತಮ್ ಶೆಟ್ಟಿ ಆಗಮಿಸಿದ್ದು , ಯುವಕರು ಶಿಸ್ತುಬದ್ಧವಾಗಿ ಕ್ರೀಡೆಯಲ್ಲಿ ತೊಡಗಿಸಿಕೊಂಡಲ್ಲಿ ರಾಜ್ಯ ಮತ್ತು ರಾಷ್ಟ್ರದಲ್ಲಿ ಪ್ರತಿನಿಧಿಸುವ ಶಕ್ತಿ ಯುವಕರಲ್ಲಿ ಖಂಡಿತವಾಗಿ ಬರುತ್ತದೆ ಅಂತ ಸಮಾರೋಪ ಸಮಾರಂಭದಲ್ಲಿ ತಿಳಿಸಿದ್ದಾರೆ. ಇನ್ನು ಈ ಕಾರ‍್ಯಕ್ರಮಕ್ಕೆ ಸುರತ್ಕಲ್ ಮಾಜಿ ಶಾಸಕ ವಿಜಯ್ ಕುಮಾರ್ ಶೆಟ್ಟಿ, ಮುಲ್ಕಿ ಸೀಮೆ ಅರಮನೆ ಗೌತಮ್ ಶೆಟ್ಟಿ, ಉದ್ಯಮಿ ನಾಗಭೂಷನ್ ರೆಡ್ಡಿ, ಹೊಟೇಲ್ ಉದ್ಯಮಿ ಶರತ್ ಮುಕ್ಕ, ಪುರುಷೋತಮ್ ದೇವಾಡಿಗ, ರಮೇಶ್ ಪೂಜಾರಿ ಚೇಳ್ಯಾರು, ರೋಹಿತ್ ಸಾಲ್ಯಾನ್ ಸಸಿಹಿತ್ಲು, ಹರೀಶ್ ದೊಡ್ಡಕೊಪ್ಪಲ ಉಪಸ್ಥಿತರಿದ್ದರು. ಅಂದಹಾಗೆ ಈ ನಿಗದಿತ ಓವರ್‌ಗಳ ಓವರ್ ಆರ್ಮ್ ಕ್ರಿಕೇಟ್ ಪಂದ್ಯಾವಳಿಯಲ್ಲಿ ಸಚಿನ್ ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ,, ಅದೇ ರೀತಿ ಸರಣಿ ಶ್ರೇಷ್ಠ ಪ್ರಶಸ್ತಿ , ಬೆಸ್ಟ್ ಬ್ಯಾಟ್ಸ್‌ಮೆನ್ ಪ್ರಶಸ್ತಿಯನ್ನು ಯಶವಂತ್ ಹಾಗೂ ಮುಕ್ಕ ಕೋಸ್ಟಲ್ ತಂಡದ ತೌಸಿಫ್ ತನ್ನದಾಗಿಸಿಕೊಂಡಿದ್ದಾರೆ..

Be the first to comment

Leave a Reply

Your email address will not be published.


*