ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದಲ್ಲಿ ಅನುಜ್ಞಾ ಕಲಶ ಬಾಲಾಲಯ ಪ್ರತಿಷ್ಠೆ

ಶ್ರೀ ಶರಭೇಶ್ವರ ದೇವಸ್ಥಾನ ಸರಪಾಡಿಯಲ್ಲಿ ಅನುಜ್ಞಾ ಕಲಶ ಬಾಲಾಲಯ ಪ್ರತಿಷ್ಠೆ ನಡೆಯಿತು. ಈ ಸಂದರ್ಭದಲ್ಲಿ ಶರಭೇಶ್ವರ ದೇವಸ್ಥಾನದ ಜೀಣೋದ್ಧಾರದ ಗೌರವ ಅಧ್ಯಕ್ಷರಾದ ಮಾಜಿ ಸಚಿವ ಬಿ ರಮಾನಾಥ ರೈ ಅವರು ಭೇಟಿ ನೀಡಿ ದೇವರ ದರ್ಶನ ಪಡೆದರು.
ನಂತರ ನಡೆದ ಸಮಾರಂಭ ಸಭೆಯಲ್ಲಿ ಮಾತನಾಡಿದ ಅವರು ಧಾರ್ಮಿಕ ಕ್ಷೇತ್ರಗಳು ಅಭಿವೃದ್ಧಿಯಾದರೆ ಸಮಾಜ ಅಭಿವೃದ್ಧಿಯಾದಂತೆ ಪ್ರತಿನಿಧಿಸುತ್ತದೆ.ದೇವಸ್ಥಾನಗಳ ಜೀರ್ಣೋದ್ಧಾರ ಸುಲಭದ ಕೆಲಸವಲ್ಲ..ಅದಕ್ಕೆ ದೇವರ ಶಕ್ತಿ ಮತ್ತು ದಯೆ ಇರಬೇಕು ಅಂತಹ ಸಮಯದಲ್ಲಿ ದೇವರೇ ನಮಗೆ ದಾರಿ ತೋರಿಸುತ್ತಾನೆ. ಈ ಜಗತ್ತಿನ ಎಲ್ಲಾ ಆಸ್ತಿಯ ಒಡೆಯ ಭಗವಂತ,ಅಂತದ್ದರಲ್ಲಿ ಅವನು ಕೊಟ್ಟ ಸಂಪತ್ತಿನ ಸ್ವಲ್ಪ ಭಾಗ ಅವನಿಗೆ ಮರಳಿ ನೀಡಿದರೆ ನಮ್ಮ ಊರಿನ ದೇವಸ್ಥಾನ ಅಭಿವೃದ್ಧಿಯಾಗುವಲ್ಲಿ ಅನುಮಾನವಿಲ್ಲ. ಹಿಂದೆ ದೇವಸ್ಥಾನದ ಜೀಣೋದ್ಧಾರ ಕಾರ್ಯ ಮೂರರಿಂದ ನಾಲ್ಕು ರಾಜರ ಒಡೆತನದಿಂದ ನಡೆಯುತ್ತಿತ್ತು..ಆದರೆ ಈಗ ಹಾಗಿಲ್ಲ, ಊರಿನ ಜನರೆಲ್ಲಾ ಸೇರಿ ಭಕ್ತಿಯಿಂದ ಜೀಣೋದ್ಧಾರ ಕಾರ್ಯದಲ್ಲಿ ಪಾಲ್ಗೊಳ್ಳುತ್ತಾರೆ.
ದೇವಸ್ಥಾನದ ಬ್ರಹ್ಮಕಲಶ ಆಗುವ ಮೊದಲು ನಮ್ಮ ನಮ್ಮ ಆತ್ಮದ ಬ್ರಹ್ಮಕಲಶ ಆಗಬೇಕು.ಆಗ ಮಾತ್ರ ದೇವರ ಕೃಪೆಗೆ ಪಾತ್ರರಾಗಲು,ಸಮಾಜದಲ್ಲಿ ಶಾಂತಯುತವಾಗಿ ಸಹಬಾಳ್ವೆ ನಡೆಸಲು ಸಾದ್ಯ ಎಂದ ಹೇಳಿದರು.

Be the first to comment

Leave a Reply

Your email address will not be published.


*