ದಕ್ಷಿಣ ಕನ್ನಡದಲ್ಲಿ 20 ಸಖಿ ಮತಗಟ್ಟೆಗಳ ಸ್ಥಾಪನೆ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮಹಿಳೆಯರೇ ನಿರ್ವಹಿಸುವ ಸಖೀ ಮತಗಟ್ಟೆಗಳ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ. ಸಖೀ ಮತಗಟ್ಟೆಗಳಲ್ಲಿ ಸೆಲ್ಫಿ ಪಾಯಿಂಟ್ ಕೂಡ ಇರಿಸಲಾಗಿದೆ. ಮಂಗಳೂರು ವಿಶ್ವವಿದ್ಯಾಲಯ ಸಂಜೆ ಕಾಲೇಜಿನ ಚುನಾವಣಾ ಮತಗಟ್ಟೆಯನ್ನು ವಿಶೇಷವಾಗಿ ಶೃಂಗರಿಸಲಾಗಿತ್ತು. ಸ್ವೀಪ್ ಸಮಿತಿಯ ವಿಶೇಷ ಪ್ರಯತ್ನವಾಗಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ದರಲ್ಲಿ 20 ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಭದ್ರತಾ ಸಿಬ್ಬಂದಿಯಿಂದ ತೊಡಗಿ ಮತಗಟ್ಚುಟೆಯ ಚುನಾವಣಾ ಸಿಬ್ಬಂದಿ ಎಲ್ಲರೂ ಮಹಿಳೆಯರೇ ಆಗಿರುತ್ತಾರೆ. ಮಾತ್ರವಲ್ಲದೆ, ಲೈವ್ ವೆಬ್ ಕಾಸ್ಟಿಂಗ್ ಮತ್ತು ವಿಡಿಯೊಗ್ರಾಫಿ ಮಾಡುವವರು ಕೂಡ ಮಹಿಳೆಯರೇ ಆಗಿರುತ್ತಾರೆ. ಪಿಂಕ್ ಮತಗಟ್ಟೆಗೆ ರಾಜಕೀಯ ಪಕ್ಷಗಳ ಪೊಲಿಂಗ್ ಏಜೆಂಟರಾಗಿ ಹಲವೆಡೆ ಮಹಿಳೆಯರನ್ನೆ ನೇಮಿಸಲಾಗಿದೆ. ಪಿಂಕ್ ಮತಗಟ್ಟೆಯ ಪ್ರಿಸೈಂಡಿಗ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲು ಹೆಮ್ಮೆ ವ್ಯಕ್ತಪಡಿಸಿದ ಮಹಿಳಾ ಅಧಿಕಾರಿಯವರು ಸಖೀ ಬೂತುಗಳಲ್ಲಿ ಇರುವ ಸೌಲಭ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

 

Be the first to comment

Leave a Reply

Your email address will not be published.


*