ಹತ್ತೂರ ನಾಡು ಪುತ್ತೂರು ಮಹಾಲಿಂಗೇಶ್ವರ ಕ್ಷೇತ್ರಕ್ಕೆ ರೈ ಭೇಟಿ

ಹತ್ತೂರ ನಾಡು ಪುತ್ತೂರಿನಲ್ಲಿ ಕಳೆದ ೮ ದಿನಗಳಿಂದ ಬಹಳ ವಿಜೃಂಭನೆಯಿಂದ ಜಾತ್ರಾ ಮಹೋತ್ಸವ ಜರುಗುತ್ತಿದ್ದು.. ಊರ ಪರವೂರಿನ ಭಕ್ತಾದಿಗಳು ಈ ಹಬ್ಬಕ್ಕೆ ಸಾಗರೋಪಾದಿಯಲ್ಲಿ ಬಂದು ಸೇರದ್ದಾರೆ.. ರಥೋತ್ಸವದ ಸಂಭ್ರಮಕ್ಕೆ ಲಕ್ಷ ಸಂಖ್ಯೆ ಭಕ್ತಾದಿಗಳು ಸಾಕ್ಷಿಯಾಗುತ್ತಾರೆ .ಇನ್ನು ಏಪ್ರಿಲ್ ೧೭ ಪ್ರತಿಬಾರಿಯಂತೆ ಈ ಬಾರಿಯೂ ಸಿಡಿಮದ್ದು ಪ್ರದರ್ಶನ ರಥೋತ್ಸವ ವಿಜೃಂಭಣೆಯಿಂದ ಜರುಗಿದೆ. ಈ ಹಿನ್ನಲೆ ಬೆಳ್ಳಿಪಾಡಿ ಕುಟುಂಬಸ್ಥರಿಗೂ ಈ ದೇವಸ್ಥಾನಕ್ಕೂ ಸಂಬಂಧವಿದ್ದು . ಮಾಜಿ ಸಚಿವ ರೈ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ.ಬುಧವಾರ ಸಂಜೆ ದೇವಸ್ಥಾನಕ್ಕೆ ಆಗಮಿಸಿದ ರೈ ಬಲಿ ಉತ್ಸವವನ್ನು ವೀಕ್ಷಣೆ ಮಾಡಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ.

Be the first to comment

Leave a Reply

Your email address will not be published.


*