ಪ್ರತಿ ತಾಲೂಕಿನ ಮತಕಟ್ಟೆಗೆ ಭೇಟಿಕೊಟ್ಟ ಸಚಿವ ಯು.ಟಿ ಖಾದರ್

ಲೋಕಸಭಾ ಕ್ಷೇತ್ರದ ಚುನಾವಣೆ ರಾಜ್ಯದೆಲ್ಲೆಡೆ ನಡೆಯುತ್ತಿದ್ದು ಮತದಾರರು ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸುತ್ತಿದ್ದಾರೆ. ಇನ್ನು ತಮ್ಮ ಮತ ಹಾಳಗಬಾರದು ಎಂಬ ಕಾರಣಕ್ಕೆ ವಿದೇಶಗಳಿಂದಲೂ ಅದೆಷ್ಟೋ ಜನರು ತಮ್ಮ ಕೆಲಸಗಳಿಗೆ ರಜೆ ಹಾಕಿ ಮತವನ್ನು ಚಲಾಯಿಸಲು ನಾಡಿಗೆ ಬಂದಿದ್ದಾರೆ .ಎಲ್ಲರು ಇಂದು ತಮ್ಮ ಮತವನ್ನು ಬಹಳ ಉತ್ಸುಕದಿಂದ ಚಲಾಯಿಸುತ್ತಿದ್ದಾರೆ.. ಇನ್ನು ದ.ಕ ಜಿಲ್ಲೆಯಲ್ಲೂ ಹುರುಪಿನಿಂದ ಮತದಾನ ಪ್ರಕ್ರಿಯೆ ನಡೆಯುತ್ತಿದೆ.. ಇತ್ತ ಉಸ್ತುವಾರಿ ಸಚಿವ ಖಾದರ್ ಬೆಳಗ್ಗೆಯೇ ತಮ್ಮ ಹಕ್ಕನ್ನು ಚಲಾಯಿಸಿ ಜಿಲ್ಲೆಯ ಎಲ್ಲಾ ತಲೂಕಿನ ವಾರ್ಡ್‌ಗಳಿಗೆ ಭೇಟಿ ನೀಡಿ ಮತದಾನದ ಪ್ರಕ್ರಿಯೆಯನ್ನು ವೀಕ್ಷಣೆ ಮಾಡುತ್ತಿದ್ದಾರೆ. ಅದರಂತೆ ಪುತ್ತೂರು, ಸುಳ್ಯದ ಗೋಳಿತೊಟ್ಟು, ನೆಲ್ಯಾಡಿಗೆ ಆಗಮಿಸಿ ಮತದಾರರ ಜೊತೆ ಒಂದಿಷ್ಟು ಹೊತ್ತು ಮಾತನಾಡಿದ್ದಾರೆ. ಬಳಿಕ ಮತಗಟ್ಟೆಗೆ ತೆರಳಿ ಮತಯಂತ್ರವನ್ನು ವೀಕ್ಷಣೆ ಮಾಡಿದ್ದಾರೆ.

Be the first to comment

Leave a Reply

Your email address will not be published.


*