ಸರತಿ ಸಾಲಿನಲ್ಲಿ ನಿಂತು ಹಕ್ಕನ್ನು ಚಲಾಯಿಸಿದ ಮಿಥುನ್ ರೈ

ಲೋಕ ಸಭಾ ಚುನಾವಣೆ ಅಂತಿದ್ದಾಗಲೇ ಲೋಕಸಭಾ ಚುನಾವಣೆಯ ದಿನ ಬಂದೇ ಬಿಡ್ತು.. ಇಂದು ಬೆಳ್ಳಂಬೆಳಗ್ಗೆ ಮತ ಹಾಕುವ ಪ್ರಕ್ರಿಯೆ ಆರಂಭಗೊಂಡಿದೆ .ಇನ್ನು ದ.ಕ ಜಿಲ್ಲಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಿಥುನ್ ರೈ ಮುಂಜಾನೆಯೇ ಮತ ಹಾಕುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.. ಕಾಂಗ್ರೆಸ್ ಅಭ್ಯರ್ಥಿಯಾದ ಮಿಥುನ್ ರೈ ಎಲ್ಲರಂತೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ.. ಇವತ್ತು ಬೆಳಗ್ಗೆ ಚುನಾವಣಾ ಕ್ಷೇತ್ರ ೧೭ ರ ಮತಕಟ್ಟೆ ೧೨೮ ರ ಮಂಗಳೂರಿನ ಬಲ್ಮಠದ ಸರಕಾರಿ ಹೆಣ್ಣು ಮಕ್ಕಳ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ಎಲ್ಲರಂತೆ ತಾನು ಮತ ಚಲಾಯಿಸಿದ್ದಾರೆ..ಇನ್ನು ಇಳಿವಯಸ್ಸಿನ ವೃದ್ದರೊಬ್ಬರು ಮತ ಚಲಾಯಿಸಲು ಮತಕಟ್ಟೆಗೆ ಬಂದಾಗ ಅವರನ್ನು ಕಾರಿನಿಂದ ಇಳಿಸಿ ತನ್ನ ಹೆಗಲು ಕೊಟ್ಟಿದ್ದಾರೆ ಅಷ್ಟೇ ಅಲ್ಲ ಅವರನ್ನು ವೀಲ್ ಚೇರ್‌ನಲ್ಲಿ ಕೂರಿಸಿ ತಮ್ಮ ಹಕ್ಕನ್ನು ಚಲಾಯಿಸಲು ಸಹಾಯವನ್ನು ಮಾಡಿದ್ದಾರೆ .. ಮಾತ್ರವಲ್ಲ ಬೆಳಗ್ಗೆಯಿಂದಲೇ ಹಲವಾರು ಪ್ರಜೆಗಳು ಮತಕಟ್ಟೆಗೆ ಆಗಮಿಸಿ ಮತಚಲಾಯಿಸುತ್ತಿದ್ದಾರೆ

Be the first to comment

Leave a Reply

Your email address will not be published.


*