ತುಂಬೆ ಗ್ರಾಮದ ವಿವಿಧ ಭಾಗಗಳಲ್ಲಿ ಮತಪ್ರಚಾರ ನಡೆಸಿದ ಖಾದರ್

ಲೋಕಸಭಾ ಚುನಾವಣೆಯ ಅಂತಿಮ ದಿನವಾದ ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ರವರು ತನ್ನ ಕಾರ್ಯಕರ್ತರೊಂದಿಗೆ ಮಂಗಳೂರು ಹಾಗೂ ಬಂಟ್ವಾಳ ಕ್ಷೇತ್ರದಲ್ಲಿ ಎಡೆಬಿಡದೇ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ತುಂಬೆ ಜ್ಯೋತಿಗುಡ್ಡೆ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಒಲವೂರು ಜುಮ್ಮಾ ಮಸೀದಿ ಹಾಗೂ ಮೋಹಿನಾ ಬಾದ್ ವ್ಯಾಪ್ತಿಯಲ್ಲಿ ಬಿರುಸಿನ ಮತ ಪ್ರಚಾರ ನಡೆಸಿದರು.
ಈ ಸಂದರ್ಭದಲ್ಲಿ ಜನರೊಂದಿಗೆ ಮಾತನಾಡಿದ ಸಚಿವರು ಲೋಕಸಭಾ ಚುನಾವಣೆಯ ಅಭ್ಯರ್ಥಿ ಮಿಥುನ್ ರೈ ಯವರಿಗೆ ಮತವನ್ನು ನೀಡಿ ಗೆಲ್ಲಿಸಬೇಕು ಎಂದು ವಿನಂತಿಸಿದರು.

ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ,ಅಮೀರ್ ತುಂಬೆ ಜೊತೆಗಿದ್ದರು.

Be the first to comment

Leave a Reply

Your email address will not be published.


*