ಮಿಥುನ್ ರೈ ಪರ ಶತ್ರುಘ್ನ ಸಿನ್ಹಾ ಪ್ರಚಾರ


  • ಮುಡಿಪುಃ ದೇಶದ ಪ್ರಧಾನಿ ತನ್ನ ವೈಯಕ್ತಿಕ ವರ್ಚಸ್ಸಿಗೆ ಸೇನೆಯ ಸಾಧನೆಯನ್ನು ಬಳಸಿಕೊಂಡಿದ್ದಾರೆ ಎಂದು ಸಂಸದ ಮತ್ತು ಕಾಂಗ್ರೆಸ್ ಸ್ಟಾರ್ ಪ್ರಚಾರಕ ಶತ್ರುಘ್ನ ಸಿನ್ಹಾ ಆರೋಪಿಸಿದ್ದಾರೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಿಥುನ್ ರೈ ಪರವಾಗಿ ಚುನಾವಣಾ ಪ್ರಚಾರಕ್ಕೆ ಮಂಗಳೂರಿಗೆ ಆಗಮಿಸಿದ ಅವರು ಮುಡಿಪು ಪ್ರದೇಶದಲ್ಲಿ ಪ್ರಚಾರ ನಡೆಸಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದರು.

ದೇಶದ ಪ್ರಧಾನಿ ತನ್ನ ವೈಯಕ್ತಿಕ ವರ್ಚಸ್ಸಿಗೆ ಮಾತ್ರವಲ್ಲದೆ ಚುನಾವಣೆ ಪ್ರಚಾರಕ್ಕೂ ಕೂಡ ಸೇನೆಯನ್ನು ಬಳಸಿಕೊಂಡಿದ್ದಾರೆ ಎಂದವರು ಹೇಳಿದರು.
ಈ ಬಾರಿಯ ಲೋಕಸಭಾ ಚುನಾವಣೆಯ ಪ್ರಚಾರಕ್ಕೆ ಬಿಜೆಪಿಯು 10 ಸಾವಿರ ಕೋಟಿ ರೂಪಾಯಿ ವೆಚ್ ಚ ಮಾಡುತ್ತಿದ್ದಾರೆ. ದೇಶದ ಚೌಕಿದಾರ್ ಎನ್ನುತ್ತಿರುವ ಮೋದಿಯ ಈ ರೀತಿಯ ವೆಚ್ಚವನ್ನು ದೇಶದ ಜನ ಪ್ರಶ್ನಿಸ ಬೇಕಾಗಿದೆ ಎಂದು ಶತ್ರುಘ್ನ ಸಿನ್ಹಾ ಹೇಳಿದ್ದಾರೆ.

ದೇಶದ ಪ್ರಧಾನಿ ತನ್ನ ವೈಯಕ್ತಿಕ ವರ್ಚಿಸ್ಸಿನ ವೃದ್ಧಿಗಾಗಿ ಐದು ವರ್ಷದಲ್ಲಿ 90 ಬಾರಿ ವಿದೇಶ ಪ್ರಯಾಣ ಮಾಡಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಶತ್ರುಘ್ನ ಸಿನ್ಹಾ ಆಪಾದಿಸಿದರು.

ಮುಡಿಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ದ.ಕ. ಲೋಕಸಭಾ ಮೈತ್ರಿ ಅಭ್ಯರ್ಥಿ ಮಿಥುನ್ ರೈ ಪರವಾಗಿ ಮುಡಿಪು ಜಂಕ್ಷನ್ ನಲ್ಲಿ ರವಿವಾರ ಬಿರುಸಿನ ಪ್ರಚಾರ ನಡೆಯಿತು.

ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಅವರ ನೇತೃತ್ವದಲ್ಲಿ ನಡೆದ ಪ್ರಚಾರ ಕಾರ್ಯದಲ್ಲಿ ಸ್ಟಾರ್ ಪ್ರಚಾರಕ ಶತ್ರುಘ್ನ ಸಿನ್ಹಾ, ಸಚಿವ ಯು.ಟಿ.ಖಾದರ್ದ, ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, .ಕ. ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಗಟ್ಟಿ, ತಾಲೂಕು ಪಂ. ಸದಸ್ಯ ಉಸ್ಮಾನ್ ಕರೋಪಾಡಿ, ಬಂಟ್ವಾಳ ತಾಲೂಕು ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಮುಖಂಡರಾದ ಪದ್ಮನಾಭ ನರಿಂಗಾನ, ಉಮರ್ ಪಜೀರ್, ಅಬ್ದುಲ್ ರಝಾಕ್ ಕುಕ್ಕಾಜೆ, ಹೈದರ್ ಕೈರಂಗಳ, ಸಿದ್ದೀಕ್ ಪಾರೆ, ದೇವದಾಸ ಭಂಡಾರಿ, ಸೀತಾರಾಮ ಶೆಟ್ಟಿ, ಸೂಫಿ ಕುಂಞಿ, ಸಮೀರ್ ಪಜೀರ್, ನಾಸೀರ್ ನಡುಪದವು, ಸಿ.ಎಂ. ಶರೀಫ್ ಪಟ್ಟೋರಿ, ಮುರಳೀಧರ್ ಶೆಟ್ಟಿ ಮಾಡೂರು, ಹಸನ್ ಸಾಂಬಾರ್ ತೋಟ, ಲೋಲಾಕ್ಷಿ ಮೊದಲಾದವರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*