ಪುತ್ತೂರಿನಲ್ಲಿ ನಡೆಯಲಿರುವ ಕಾಂಗ್ರೇಸ್ ಪಕ್ಷದ ಬೃಹತ್ ಸಮಾವೇಶ

ದ.ಕ. ಲೋಕಸಭಾ ಕ್ಷೇತ್ರದ ಚುನಾವಣೆಯ ಅಂಗವಾಗಿ ಪುತ್ತೂರಿನಲ್ಲಿ ನಡೆಯಲಿರುವ ಕಾಂಗ್ರೇಸ್ ಪಕ್ಷದ ಬೃಹತ್ ಸಮಾವೇಶಕ್ಕೆ ಅಭ್ಯರ್ಥಿಯಾದ ಮಿಥುನ್ ರೈ ಹಾಗೂ ಸಚಿವರಾದ ಡಿ.ಕೆ.ಶಿವಕುಮಾರ್ ಭಾಗವಹಿಸಲಿದ್ದು ಈ ಹಿನ್ನಲೆಯಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಹಾಗೂ ಮಾಜಿ ಶಾಸಕಿ ಶಕುಂತಲ ಶೆಟ್ಟಿ ಸಮಾವೇಶಕ್ಕೆ ಸಿದ್ದವಾಗುತ್ತಿರುವ ಬೃಹತ್ ವೇದಿಕೆಯಾ ವೀಕ್ಷಣೆ ನಡೆಸಿದರು.

ಕಾಂಗ್ರೇಸ್ ಮತ್ತು ಜೆ.ಡಿ.ಎಸ್. ಮೈತ್ರಿ ಸರ್ಕಾರವು ಚುನಾವಣಾ ವೀಕ್ಷಕರನಾಗಿ ಮಾಜಿ ಸಚಿವ ರಮಾನಾಥ ರೈಯವರನ್ನು ಆಯ್ಕೆ ಮಾಡಲಾಗಿದೆ. ದ.ಕ. ಜಿಲ್ಲೆಯ ಮೈತ್ರಿ ಸರಕಾರದ ಅಭ್ಯರ್ಥಿಯಾದ ಮಿಥುನ್ ರೈಯನ್ನು ಗೆಲ್ಲಿಸುವುದೆ ನಮ್ಮ ಗುರಿ. ನಮ್ಮ ಬೂತ್ ಮಟ್ಟದ ಕಾರ್ಯಕರ್ತರೇ ನಮಗೆ ರಾಷ್ರೀಯ ನಾಯಕರು, ನಮ್ಮ ಈ ಮೈತ್ರಿ ಸರಕಾರದ ಒಗ್ಗಟ್ಟು ಈ ಬಾರಿ ದ.ಕ.ಜಿಲ್ಲೆಯಲ್ಲಿ ಬಿಜೆಪಿಗೆ ಮುಳ್ಳಗಲಿದೆ ಎಂದರು.

Be the first to comment

Leave a Reply

Your email address will not be published.


*