ಪೈಪೋಟಿ ಮಾಡಿ ಟಿಕೇಟ್ ಪಡೆದಿಲ್ಲಃ ಮಿಥುನ್ ರೈ

ಮಂಗಳೂರುಃ ಪೈಪೋಟಿ ಮಾಡಿ ನಾನು ಲೋಕಸಭಾ ಚುನಾವಣಾ ಟಿಕೇಟ್ ಪಡೆದುಕೊಂಡಿಲ್ಲ. ಎಲ್ಲ ಹಿರಿಯ ನಾಯಕರ ಆರ್ಶೀವಾದದೊಂದಿಗೆ  ಚುನಾವಣಾ ಕಣಕ್ಕಿಳಿಯುತ್ತಿದ್ದೇನೆ ಎಂದು ಕಾಂಗ್ರೆಸ್ ಪಕ್ಷ ಲೋಕಸಭಾ ಅಭ್ಯರ್ಥಿ ಮಿಥುನ್ ರೈ ಹೇಳಿದ್ದಾರೆ.

ಅವರಿಂದು ಬಿ ಫಾರಂ ಪಡೆದ ಅನಂತರ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿ ಪಕ್ಷದ ಕಾರ್ಯರ್ತರ ಸಭೆಯಲ್ಲಿ ಮಾತನಾಡಿದರು.
ಜನಾರ್ದನ ಪೂಜಾರಿ ಆಶೀರ್ವಾದ

ಮಾಜಿ ಕೇಂದ್ರ ಸಚಿವ ಬಿ.ಜರ್ನಾದನ ಪೂಜಾರಿ ಅವರ ಆರ್ಶೀವಾದದಿಂದ ನನಗ ಟಿಕೇಟ್ ದೊರೆತಿದೆ. ಮಿಥುನ್ ರೈಗೆ ಟಿಕೇಟ್ ಕೊಡಿಸುವುದರಲ್ಲಿ ಕಾಂಗ್ರೆಸ್ ಮುಕಂಡರಾದ ಐವನ್ ಡಿ ಸೋಜ, ರಮಾನಾಥ ರೈ, ಬಿ.ಕೆ ಹರಿಪ್ರಸಾದ್, ವಿನಯ ಕುಮಾರ್ ಸೊರಕೆ ಸಹಕರಿಸಿದ್ದಾರೆ ಎಂದು ಮಿಥುನ್ ರೈ ಹೇಳಿದರು.

ಚುನಾವಣೆ ಮುಗಿಯುವ ತನಕ ಗ್ರಾಮಗಳಿಂದ ಹೊರಬರಬೇಡಿ ಎಂದು ಬೂತ್ ಕಾರ್ಯಕರ್ತರಲ್ಲಿ ಮಿಥುನ್ ರೈ ಮನವಿ ಮಾಡಿದರು.

Be the first to comment

Leave a Reply

Your email address will not be published.


*