ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಚಿವ ಯು.ಟಿ.ಖಾದರ್

ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ಧೇಶಿಸಿ ಮಾತನಾಡಿದ ಸಚಿವ ಯು.ಟಿ.ಖಾದರ್ ಅವರು,ತಳಮಟ್ಟದ,ಬೂತ್ ಮಟ್ಟದ ನಾಯಕರುಗಳು ಶಕ್ತಿವಂತರಾಗಿ ದುಡಿದರೆ ಮಾತ್ರ ಈ ಚುನಾವಣೆಯನ್ನು ಎದುರಿಸಲು ಸಾದ್ಯ. ಈ ಚುನಾವಣೆ ಎಂ.ಪಿ ಚುನಾವಣೆ ಎಂಬುದನ್ನು ಬಿಟ್ಟು, ಮುಂಬರುವ ನಮ್ಮ ಶಾಸಕರ ಚುನಾವಣೆ ಮತ್ತು ಕಾರ್ಪರೇಟರ್‍ಗಳ ಚುನಾವಣೆ ಎಂಬುದಾಗಿ ತಯಾರಿಯಾಗಿರಬೇಕು. ಗ್ರಾಮದ ಬಗ್ಗೆ ತಲೆಕೆಡಿಸಿಸದೆ ಅವರ ಅವರ ಬೂತ್ ಗಳಲ್ಲಿ ಕಾರ್ಯಕರ್ತರನ್ನು ಸೇರಿಸಿ ಅವರಿಗೆ ಕಾಂಗ್ರೆಸ್ ನ ಬಗ್ಗೆ ಮಾಹಿತಿ ನೀಡಿ,5 ವರ್ಷಗಳಲ್ಲಿ ಬಿಜೆಪಿ ಸರಕಾರ ಜನಸಾಮಾನ್ಯರಿಗೆ ಮಾಡಿದ ಅನ್ಯಾಯದ ವಿರುದ್ಧ ಹೋರಾಡಬೇಕು.ಬಿಜೆಪಿ ಸರಕಾರ ಹೇಳಿದ ಯಾವುದೇ ಮಾತುಗಳನ್ನು ನಡೆಸಿಕೊಟ್ಟಿಲ್ಲ.ಗ್ಯಾಸ್ ಬೆಲೆ ಏರಿಕೆ ಮಾಡಿದ್ದಲ್ಲದೇ,ಅದೆಷ್ಟೋ ಜನರು ದುಡಿಮೆ ಇಲ್ಲದೇ ಪರದಾಡುವ ಪರಿಸ್ಥಿತಿಗೆ ತಂದೊದಗಿಸಿದೆ.
ಮಿಥುನ್ ರೈ ಗೆದ್ದ ನಂತರವೇ ಮುಂದೆ ಕಾಂಗ್ರೆಸ್ ಕಛೇರಿ ನೋಡುವಂತಾಗಬೇಕು.ಒಟ್ಟಿನಲ್ಲಿ ಕಾಂಗ್ರೆಸ್ ವಿಜಯ ಪತಾಕೆಯನ್ನು ಹಾರಿಸುವಲ್ಲಿ ನಾವೆಲ್ಲ ಕೈಗೂಡಿಸಬೇಕು ಎಂದು ಕಾರ್ಯಕರ್ತರಲ್ಲಿ ಹುರಿದುಂಬಿಸಿದರು.

Be the first to comment

Leave a Reply

Your email address will not be published.


*