ಲೋಕಸಭಾ ಚುನಾವಣೆಯಲ್ಲಿ ಜಾತ್ಯಾತೀತ ಮತ್ತು ಪ್ರಜಾಸತ್ತಾತ್ಮಕ ಪಕ್ಷಕ್ಕೆ ಬೆಂಬಲ

ದಲಿತ ಸಂಘರ್ಷ ಅಂಬೇಡ್ಕರ್ ವಾದ ರಾಜ್ಯ ಸಮಿತಿಯು ಮುಂಬರುವ 17ನೇ ಲೋಕಸಭಾ ಚುನಾವಣೆಯಲ್ಲಿ ಜಾತ್ಯಾತೀತ ಮತ್ತು ಪ್ರಜಾಸತ್ತಾತ್ಮಕ ಪಕ್ಷಗಳನ್ನು ಬೆಂಬಲಿಸಲು ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಮತ್ತು ಜಾತ್ಯಾತೀತ ಪಕ್ಷಗಳನ್ನು ಬೆಂಬಲಿಸಲಿವೆ.
ಕಳೆದ 5 ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ಸರಕಾರವು ಜನರ ಆಶೋತ್ತರಗಳನ್ನು ಈಡೇರಿಸಲು ಸಂಪೂರ್ಣ ವಿಫಲವಾಗಿದೆ. ಕೃಷಿ ಬಿಕ್ಕಟ್ಟಿನಿಂದ ರೈತರ ಆತ್ಮಹತ್ಯೆಗಳ ಸರಣಿ ಮುಂದುವರಿದಿದೆ. ಉದ್ಯೋಗ ಭರವಸೆಯನ್ನು ನೀಡಿದ ಮೋದಿ ಸರಕಾರದ ಮಾತು ಹುಸಿಯಾಗಿದೆ.
ಸಣ್ಣ ಉದ್ದಿಮೆದಾರರು ನೋಟು ಅಮಾನ್ಯುಕರಣದಿಂದ ಸಂಪೂರ್ಣವಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ.ನಷ್ಟದಿಂದ ಒದ್ದಾಡುತ್ತಿದ್ದಾರೆ.ದಲಿತ,ಅಲ್ಪಸಂಖ್ಯಾತರ ದೌರ್ಜನ್ಯದ ಪ್ರಮಾಣವು ಹೆಚ್ಚಳವಾಗಿದೆ. ಕೇಂದ್ರದ NCRB ವರದಿಯಂತೆ ಶೇ. 40%ರಷ್ಟು ಹೆಚ್ಚಳವಾಗಿದೆ.
ಸಂವಿದಾನದ ಬದಲಾವಣೆ ಮಾಡುವ ವಿಚಾರವನ್ನು ಸಂಘ ಪರಿವಾರದ ನಾಯಕರಿಂದ ಮೇಲಿಂದ ಮೇಲೆ ಹೇಳಲಾಗಿಸುತ್ತಿದ್ದಾರೆ. ಪ್ರಜಾಪ್ರಭುತ್ವದ ಉಳಿವಿಗಾಗಿ ಸಂವಿಧಾನದ ರಕ್ಷಣೆಗಾಗಿ ಜಾತ್ಯಾತೀತ ಶಕ್ತಿಗಳ ಐಕ್ಯತೆ ಇಂದು ತುರ್ತಿನ ಕೆಲಸ ಆಗಬೇಕಾಗಿದೆ.
ನಾಡಿನ ಜನತೆಯು ಎಂದಿಗಿಂತಲೂ ಈ ಲೋಕಸಭಾ ಚುನಾವಣೆ ಅತ್ಯಂತ ಮಹತ್ವವನ್ನು ಹೊಂದಿದೆ ಎಂದು ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ್ ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*