ಕ್ಯಾನ್ಸರ್ ನಿಂದ ಮಗನನ್ನು ಬದುಕಿಸಲು ಈ ಅಸಹಾಯಕ ತಾಯಿಗೆ ನೆರವಾಗಿ

ಮಂಗಳೂರು ಮಾರ್ಚ್ 22: ಆತ ನೂರಾರು ಕನಸುಗಳನ್ನು ಹೊಂದಿದ್ದ ಯುವಕ. ಗಂಡು ದಿಕ್ಕಿಲ್ಲದ ಮನೆಗೆ ತಾಯಿಗೆ ಒಬ್ಬನೇ ಮಗನಾಗಿ ಬೆಳೆದ. ಕಷ್ಟಪಟ್ಟು ವಿಧ್ಯಾಭ್ಯಾಸ ಮಾಡಿ ಕಾಲೇಜಿಗೆ ನಂಬರ್ ಒನ್ ಕೂಡಾ ಆದ. ಆದ್ರೆ ವಿಧಿ ಆತನ‌ ಬಾಳಲ್ಲಿ ಕ್ರೂರ ಆಟ ಆಡಿದೆ.ಶ್ವಾಸಕೋಶದ ಕ್ಯಾನ್ಸರ್ ಆತನ ಕನಸುಗಳನ್ನು ಕಿತ್ತು ತಿನ್ನುತ್ತಿದೆ.

ಒಮ್ಮೆ ದೇವರೂ ಕ್ರೂರಿಯಾಗಿ ಕಾಣುತ್ತಾನೆ ಅಂತಾರಲ್ಲ..ಬಹುಷ ಈ ಯುವಕನ ಸ್ಥಿತಿ‌ ನೋಡಿ ನಿಮಗೂ ಹಾಗೇಯೇ ಅನಿಸಬಹುದು. ಗಂಡು ದಿಕ್ಕಿಲ್ಲದ ಕುಟುಂಬಕ್ಕೆ ಆಧಾರಸ್ತಂಭವಾಗಿ ತಾಯಿಗೆ ನೆಮ್ಮದಿಯ ಜೀವನ ಕೊಡುವ ಮಗನಾಗಿ‌ ಬದುಕಿ ಬಾಳಬೇಕಾಗಿದ್ದ ಈ ಯುವಕನ ಹೆಸರು ಪದ್ಮಪ್ರಸಾದ್.

ಬೆಳ್ತಂಗಡಿ ತಾಲೂಕಿನ ವೇಣೂರಿನ ಗುಂಡೂರಿ ನಿವಾಸಿ ಪದ್ಮಪ್ರಸಾದ್ ಬಾಳಲ್ಲಿ ವಿಧಿ ತನ್ನ ಕ್ರೂರ ಲೀಲೆಯನ್ನು ತೋರಿಸಿದೆ.. ಬೀಡಿಕಟ್ಟಿ ಮಗನನ್ನು ಕಷ್ಟಪಟ್ಟು ಓದಿಸಿದ ತಾಯಿಯ ಕಣ್ಣಿನಲ್ಲಿ ಬರೀ ಕಣ್ಣೀರಲ್ಲದೆ ಏನೂ ಕಾಣುತ್ತಿಲ್ಲ.‌ತಾಯಿಯ ಶ್ರಮಕ್ಕೆ ಸರಿಯಾಗಿ ಕಾಲೇಜಿಗೆ ಟಾಪ್ ಆಗಿ‌ಹೊರಹೊಮ್ಮಿದ ಪದ್ಮಪ್ರಸಾದ್ ನ ಬಾಳಲ್ಲಿ ಈಗ ಕ್ಯಾನ್ಸರ್ ಎಂಬ ಮಹಾಮಾರಿ ಅಂಟಿ ಕೊಂಡಿದೆ.

Be the first to comment

Leave a Reply

Your email address will not be published.


*