ನಳಿನ್ ಎದುರು ಮಿಥುನ್ ಸ್ಪರ್ಧೆ : ದ.ಕ.ದಲ್ಲಿ ಯುವ ನಾಯಕರ ಫೈಟ್?

ಮಂಗಳೂರು: ನಳಿನ್ ಅವರಿಗೆ ಸೂಕ್ತ ಪ್ರತಿಸ್ಪರ್ಧಿಯನ್ನು ಹುಡುಕುವಲ್ಲಿ ಕಾಂಗ್ರೆಸ್ ಪಕ್ಷ ಹೊಸ ಮುಖ ಪರಿಚಯಿಸಿದೆ. ಮೈತ್ರಿ ಒಪ್ಪಂದಂತೆ ದ.ಕ. ಲೋಕಸಭಾ ಕ್ಷೇತ್ರವು ಕಾಂಗ್ರೆಸ್ ಪಾಲಾಗಿದೆ ಹಾಗಾಗಿ ಇಲ್ಲಿ ನಳಿನ್ ಕುಮಾರ್ ಕಟೀಲ್ ಎದುರು ಸೂಕ್ತ ಅಭ್ಯರ್ಥಿಯನ್ನು ಹಾಕುವ ಹೊಣೆ ಈಗ ‘ಕೈ’ ಪಾಲಿಗಿತ್ತು.

ಅಂತೂ ಇಂತೂ ಕಾಂಗ್ರೆಸ್ ಈ ಬಾರಿ ನಳಿನ್ ಎದುರಾಳಿಯಾಗಿ ಯುವ ಕಾಂಗ್ರೆಸ್ ನಾಯಕ ಮಿಥುನ್ ಕುಮಾರ್ ರೈ ಅವರ ಹೆಸರು ‘ಫೈನಲ್’ ಆಗಿದೆ. ಕಳೆದ ಬಾರಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಿಥುನ್ ರೈ ಅವರಿಗೆ ಕೊನೇ ಕ್ಷಣದಲ್ಲಿ ಟಿಕೆಟ್ ತಪ್ಪಿತ್ತು. ಆದರೆ ಈ ಬಾರಿ ಪ್ರಭಾವಿ ಸಂಸದ ನಳಿನ್ ಅವರನ್ನು ಎದುರಿಸಲು ಹೊಸ ಮುಖವೇ ಸೂಕ್ತ ಎಂಬ ನಿರ್ಧಾರಕ್ಕೆ ಕಾಂಗ್ರೆಸ್ ಹೈಕಮಾಂಡ್ ಬಂದಿದ್ದು ಮಿಥನ್ ಅವರಿಗೆ ಸ್ಪರ್ಧಿಸಲು ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ.ನಳಿನ್ ಕುಮಾರ್ ಎದುರಾಗಿ ಮಿಥುನ್ ರೈ ಸ್ಪರ್ಧಿಸುತ್ತಿದ್ದು ದಕ್ಷಿಣ ಕನ್ನಡ ಚುನಾವಣಾ ಕಣ ಇನ್ನಷ್ಟು ರಂಗು ಪಡೆದುಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.

Be the first to comment

Leave a Reply

Your email address will not be published.


*