ವಾತ್ಸಲ್ಯ ಕೇಂದ್ರಕ್ಕೆ ಬೇಕಾಗಿದೆ ದಾನಿಗಳ ನೆರವು

ಅನಾಥರನ್ನು ಹಾಗೂ ನಿರ್ಗತಿಕರನ್ನು ಉದಾರ ದಾನಿಗಳ ಸಹಕಾರದಿಂದ ಆಶ್ರಯ ಕೊಟ್ಟು ಉಚಿತ ಊಟ ಮತ್ತು ವೈದ್ಯಕೀಯ ಚಿಕಿತ್ಸೆಯನ್ನು ನೀಡುವ ಉದ್ದೇಶವನ್ನು ಇಟ್ಟುಕೊಂಡು ವಾತ್ಸಲ್ಯ ಕೇಂದ್ರ ಎಂಬ ಸಂಸ್ಥೆಯನ್ನು ೭೬ ಬಡಗಬೆಟ್ಟು ಗ್ರಾಮದ ಕುಕ್ಕಿಕಟ್ಟೆ ಮಸೀದಿಯ ಬಳಿ ಇರುವ ಮನೆಯೊಂದರಲ್ಲಿ ಆರಂಭವಾಗಿದೆ.ದಿಕ್ಕು ದೆಸೆಯಿಲ್ಲದವರಿಗೆ ನಿಸ್ವಾರ್ಥ ಮನೋಭಾವನೆಯಿಂದ ಆಸರೆಯಾಗುವುದೇ ಈ ಸಂಸ್ಥೆಯ ಉದ್ದೇಶವಾಗಿದ್ದು ಅನಾಥರು ಹಾಗೂ ನಿರ್ಗತಿಕರನ್ನು ಸಲಹುವ ಸದುದ್ದೇಶ ವಾತ್ಸಲ್ಯ ಕೇಂದ್ರ ಹೊಂದಿದೆ.
ಈ ಸಂಸ್ಥೆಗೆ ದಾನಿಗಳ ಸಹಕಾರ ಅಗತ್ಯವಿದ್ದು ಸಹಕರಿಸುವ ಮನೋಭಾವದವರು 9743285855 ಸಂಖ್ಯೆಗೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.
ವಾತ್ಸಲ್ಯ ಕೇಂದ್ರದ ವ್ಯವಸ್ಥಾಪಕರಾದ ಅನ್ಸಾರ್ ಅಹಮದ್, ಅಂಬಲಪಾಡಿ ರೋಟರಿ ಅಧ್ಯಕ್ಷರಾದ ಖಲೀಲ್ ಅಹ್ಮದ್, ಮಲಬಾರ್ ಗೋಲ್ಡ್ ನ ವ್ಯವಸ್ಥಾಪಕರಾದ ಹಫೀಝ್ ರೆಹಮಾನ್, ಮಾಜಿ ನಗರಸಭಾ ಸದಸ್ಯರಾದ ಹಿಲರಿ ಜತ್ತನ್ನ, ರಾಘವೇಂದ್ರ ಶೆಟ್ಟಿ, ಉದ್ಯಮಿ ಸಮೀರ್ ಅಹಮದ್ ಎಲ್ಲರ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಗಿದೆ.

Be the first to comment

Leave a Reply

Your email address will not be published.


*