ಸ್ಪೇಷಲ್ ಒಲಂಪಿಕ್ಸ್ ಜಾಗತಿಕ ಬೇಸಿಗೆ ಕ್ರೀಡಾಕೂಟ-೨೦೧೯

ಅಬುಧಾಬಿಯಲ್ಲಿ ಇತ್ತಿಚಿಗಷ್ಟೆ ನಡೆದ ಸ್ಪೇಷಲ್ ಒಲಂಪಿಕ್ಸ್ ಜಾಗತಿಕ ಬೇಸಿಗೆ ಕ್ರೀಡಾಕೂಟ-೨೦೧೯ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ ಅಭಿಲಾಷ್ ಬಿ ೩ ಚಿನ್ನ ೧ ಕಂಚು, ಪ್ರಜ್ವಲ್ ಲೋಬೋ ೩ ಚಿನ್ನ ಮತ್ತು ಸ್ಕಾಟ್ನಲ್ಲಿ ಬೆಳ್ಳಿ ಪದಕ, ಆಸ್ಲಿ ಡಿ’ಸೋಜಾ ಒಟ್ಟು ೪ ಕಂಚಿನ ಪದಕಗಳನ್ನು ಗೆದ್ದಿದ್ದಾರೆ.ಸೈಂಟ್ ಆಗ್ನೇಸ್ ವಿಶೇಷ ಶಾಲಾ ವೃತ್ತಿಪರ ತರಬೇತಿ ಕೇಂದ್ರದ ನಿಜಾಮುದ್ದೀನ್ ಯುನಿಫೈಡ್ ಫುಟ್‌ಬಾಲ್‌ನಲ್ಲಿ ಭಾಗವಹಿಸಿದ್ದು ತಂಡಕ್ಕೆ ೪ನೇ ಸ್ಥಾನ ಬಂದಿದೆ.ಪದಕ ವಿಜೇತ ಕ್ರೀಡಾಪಟುಗಳನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಸಾನಿಧ್ಯ ಮತ್ತು ಸೈಂಟ್ ಆಗ್ನೇಸ್ ಶಾಲೆ ಜಂಟಿಯಾಗಿ ಹಮ್ಮಿಕೊಂಡಿದ್ದು ಮಾರ್ಚ ೨೫ರಂದು ಬಿಜೈನಲ್ಲಿ ಕೆಎಸ್‌ಆರ‍್ಟಿಸಿ ಬಸ್ ನಿಲ್ದಾಣದಲ್ಲಿ ಅಂತರಾಷ್ಟ್ರೀಯ ಕ್ರೀಡಾಪಟುಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪತ್ರಿಕಾಗೋಷ್ಠಿ ನಡೆಸಲಾಯಿತು.

 

Be the first to comment

Leave a Reply

Your email address will not be published.


*