ಫಿಸಿಯೋಥೆರಪಿ,ನರ್ಸಿಂಗ್,ಫಾರ್ಮಸಿ ವ್ಯಾಸಂಗವು ಉತ್ತಮ ಭವಿಷ್ಯಕ್ಕೆ ಸಹಕಾರಿ ;ಯು.ಟಿ.ಕೆ

ಶ್ರೀ ದೇವಿ ಫಿಸಿಯೋಥೆರಪಿ ಕಾಲೇಜ್,ಶ್ರೀ ದೇವಿ ಕಾಲೇಜ್ ಆಫ್ ನರ್ಸಿಂಗ್,ಶ್ರೀ ದೇವಿ ಫಾರ್ಮಸಿ ಕಾಲೇಜ್ ವತಿಯಿಂದ ಗ್ರಾಜ್ಯುವೇಶನ್ ಡೇ,ಅನ್ಯೋಯಲ್ ಡೇ, ಲ್ಯಾಂಪ್ ಲೈಟಿಂಗ್ ಸೆರೆಮನಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ಧಿ ಸಚಿವರಾದ ಯು.ಟಿ.ಖಾದರ್ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ಎಲ್ಲಾ ವಿದ್ಯಾರ್ಥಿಗಳಿಗೂ ಅಭಿನಂದೆ ಸಲ್ಲಿಸುತ್ತಾ ನಮ್ಮ ಜೀವನದಲ್ಲಿ ವಿದ್ಯಾಭ್ಯಾಸ ಮಹತ್ವದ ಪಾತ್ರವಹಿಸಿದೆ.ಈ ನಿಟ್ಟಿನಲ್ಲಿ ತಂದೆ ತಾಯಿಯರು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವ ಸಲುವಾಗಿ ಬಹಳಷ್ಟು ಪರಿಶ್ರಮವಹಿಸುತ್ತಾರೆ.ಹೆತ್ತವರ ಆಕಾಂಕ್ಷೆಯಂತೆ ಉತ್ತಮ ವಿದ್ಯಾಭ್ಯಾಸ ಭವಿಷ್ಯ ರೂಪಿಸಲು ಸಹಕಾರಿ.ಫಿಸಿಯೋಥೆರಪಿ,ನರ್ಸಿಂಗ್,ಫಾರ್ಮಸಿ ವ್ಯಾಸಂಗವು ಉತ್ತಮ ಭವಿಷ್ಯ ಹೊಂದಿದೆ.ವಿದ್ಯಾರ್ಥಿಗಳು ಇಂದಿನಿಂದಲೇ ತಾಳ್ಮೆ,ಸಮರ್ಪಣೆ ಹಾಗೂ ಪ್ರಾಮಾಣಿಕತೆ ಬೆಳೆಸಿಕೊಂಡಲ್ಲಿ ನಮ್ಮ ಮುಂದಿನ ದಿನಗಳಿಗೆ ಸಹಕಾರಿ ಎಂದು ಹೇಳಿದರು.

Be the first to comment

Leave a Reply

Your email address will not be published.


*